ಚಿಕ್ಕಬಳ್ಳಾಪುರ: ದೊಡ್ಡ ಪೈಲಾಗೂರ್ಕಿ ಗ್ರಾಮ ಪಂಚಾಯತಿ ಆವರಣದಲ್ಲಿ ಆಯುಷ್ ಇಲಾಖೆಯ ವತಿಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುಷ್ ಸಲಹೆ ಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಡಾಕ್ಟರ್ ದಿವ್ಯ ಲಕ್ಷ್ಮಿ ಅವರು ಮಾತನಾಡಿ,ಪ್ರಸ್ತುತ ಸ್ವದೇಶಿ ವಸ್ತುಗಳನ್ನು ,ಸ್ವದೇಶಿ ಆಹಾರ ಧಾನ್ಯಗಳ ಬಳಕೆ,ದೇಶೀಯ ಆರೋಗ್ಯ ವಿಧಾನ ಗಳಾದ ಆಯುಷ್ ಕ್ವಾತ,(ಕಷಾಯ), ತಯಾರಿಸುವ ವಿಧಾನ,ಉಪಯೋಗಿಸುವ ವಿಧಾನಗಳ ಬಗ್ಗೆ ತಿಳಿಸಿ ಕೊಟ್ಟರು.
ಡಾ.ಅವಿನಾಶ್ ಅವರು ಮಾತನಾಡಿ,ಹಳ್ಳಿಗಳಲ್ಲಿ ಪುರಾತನ ಕಾಲದಿಂದಲೂ ಆಯುರ್ವೇದಿಕ್ ಔಷಧಿಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ.ಇಂಗ್ಲಿಷ್ ಔಷಧಿ ಗಳ ಬಳಕೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆ ಮಾಡಿ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಕೋರೋನ ಸೈನಿಕರ ತಂಡದ ತಾಲ್ಲೂಕು ಸಂಯೋಜಕರಾದ ಸ್ಟುಡಿಯೋ ಶ್ರೀನಿವಾಸ ಅವರು ಮಾತನಾಡಿ,ನಮ್ಮ ಹಿರಿಯರ ಆಚಾರ ವಿಚಾರಗಳನ್ನು ಗೌರವದಿಂದ ನಾವೆಲ್ಲರೂ ಸೇರಿ ಪಾಲಿಸಬೇಕು.
ಸಾಮಾಜಿಕ ಅಂತರವನ್ನು ಕಾಯ್ದು ಕೊಂಡು, ಕೋರೋ ನ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಹೆಚ್ಚು ಗಮನ ಹರಿಸ ಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಯುಷ್ ಇಲಾಖೆಯ ಡಾ.ದೀಪ, ಡಾ.ಸುಂದರ್ ರಾಜ್,ಕಂದಾಯ ಇಲಾಖೆಯ ಕಾರ್ಯದರ್ಶಿ ಕೃಷ್ಣ ನಾಯಕ್, ಸಾಯಿ ಗಂಗಾ ಫೌಂಡೇಶನ್ ನ ಅಧ್ಯಕ್ಷ ರಾದ ಗಂಗಾಧರ.ಕೆ. ಟಿ , ಶೇಖರ್,ಕೋರೋನ ಸೈನಿಕರಾದ ಶ್ರೀಧರ್,ಪ್ರಜ್ವಲ್,ಮೋಹನ್, ಆಶಾ ಕಾರ್ಯಕರ್ತೆಯ ರು, ಅಂಗನವಾಡಿ ಶಿಕ್ಷಕಿಯರು,ಮತ್ತಿತರರು ಭಾಗವಹಿಸಿದ್ದರು.