ಶನಿವಾರ ಮತ್ತೆ ಎಂಟು ಜನರಿಗೆ ಮಹಾಮಾರಿ ಕೊರೋನಾ ಸೋಂಕು

0
49

ಕಲಬುರಗಿ: ಜಿಲ್ಲೆಯಲ್ಲಿ ಶನಿವಾರ ಮತ್ತೆ ಎಂಟು ಜನರಿಗೆ ಕೊರೋನಾ ಸೋಂಕು ದೃಢವಾಗಿದ್ದು, ಇದರಿಂದ ಸೋಂಕಿತರ ಸಂಖ್ತೆ 94ಕ್ಕೆ ಏರಿದೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.

ಕಲಬುರಗಿ ನಗರದ ರೋಗಿ ಸಂಖ್ಯೆ-848 ಸಂಪರ್ಕದಲ್ಲಿ ಬಂದ ಮೋಮಿನಪುರ ಪ್ರದೇಶದ 33 ವರ್ಷದ ಯುವತಿ (P-1080), 15 ವರ್ಷದ ಬಾಲಕಿ (P-1081), 14 ವರ್ಷದ ಬಾಲಕಿ (P-1082), 55 ವರ್ಷದ ಮಹಿಳೆ (P-1083), 60 ವರ್ಷದ ಪುರುಷ (P-1086) ಹಾಗೂ 10 ವರ್ಷದ ಬಾಲಕಿ (P-1087) ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.
ಹುಮನಾಬಾದ ಬೇಸ್-ಮೋಮಿನಪುರ ಕಂಟೇನ್ ಮೆಂಟ್ ಝೋನ್ ಪ್ರದೇಶದಲ್ಲಿ ಕಳೆದ ಮೇ-11 ರಂದು ಕೊರೋನಾ ಸೋಂಕಿನಿAದ ಮೃತ ವ್ಯಕ್ತಿಯ ಸಂಪರ್ಕದಲ್ಲಿ ಬಂದ ಇದೇ ಪ್ರದೇಶದ 50 ವರ್ಷದ ಮಹಿಳೆಗೂ (P-1085) ಕೋವಿಡ್-19 ಅಂಟುಕೊAಡಿದೆ.

Contact Your\'s Advertisement; 9902492681

ಇದಲ್ಲದೆ ಇತ್ತೀಚೆಗೆ ಮುಂಬೈನಿAದ ವಲಸೆ ಬಂದು ಚಿತ್ತಾಪುರದ ನಾಗಾವಿ ಬಳಿಯ ಮೋರಾರ್ಜಿ ದೇಸಾಯಿ ವಸತಿಯ ಶಾಲೆ ಕ್ವಾರಂಟೈನ್ ಸೆಂಟರ್ ನಲ್ಲಿದ್ದ ಚಿತ್ತಾಪುರ ತಾಲೂಕಿನ ಬೆಳಗೇರಾ ತಾಂಡಾ ಮೂಲದ 30 ವರ್ಷದ ಮಹಿಳೆಗೂ ಕೊರೋನಾ ಸೋಂಕು ದೃಢವಾಗಿದ್ದು, ಇವರನ್ನು ಈಗಾಗಲೆ ಕ್ವಾರಂಟೈನ್ ಸೆಂಟರ್‌ನಿAದ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದರಿಂದ ಜಿಲ್ಲೆಯಲ್ಲಿ ಕೊರೋನಾ ಪೀಡಿತ 94 ರೋಗಿಗಳಲ್ಲಿ 7 ಜನ ನಿಧನರಾಗಿದ್ದು, 47 ರೋಗಿ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಉಳಿದಂತೆ 40 ರೋಗಿಗಳಿಗೆ ಚಿಕಿತ್ಸೆ ಮುಂದುವರೆದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here