ಕಲಬುರಗಿ: ರೈತರು ಜೇೂಳದ ಬೆಲೆ ಕಡಿಮೆ ಇರುವುದರಿಂದ ರೈತ ತನ್ನ ಜೀವನ ಉಪಯೋಗಿಸುವುದ್ದಕ್ಕೆ ಎಷ್ಟು ಜೇೂಳ ಬೇಕೋ ಅಷ್ಟೇ ಕಡಿಮೆ ಪ್ರಮಾಣದಲ್ಲಿ ಬೇಳೆಯುತ್ತಿದ್ದು, ಬೆಳೆಯುವುದು ಕಡಿಮೆ ಮಾಡಿದ ಪ್ರಯುಕ್ತ ಜಾನುವಾರುಗಳಿಗೆ ತಿನ್ನಲು ಮೇವು ಸಾಕಾಗುತ್ತಿಲ ಹಾಗಾಗಿ ಪ್ರೋತ್ಸಾಹ ಧನ ಅತಿ ಅವಶ್ಯಕ ಎಂದು ಕರ್ನಾಟಕ ಕೃಷಿಕ ಸಮಾಜ ಸದಸ್ಯ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟೊಮೆಟೇೂ,ಮೆಣಸಿನಕಾಯಿ, ಕುಂಬಳಕಾಯಿ, ಕ್ಯಾರೆಟ್, ಈರುಳ್ಳಿ, ಹೀರೇಕಾಯಿ, ಇವುಗಳು ಬೆಳೆಯುವ ರೈತರಿಗೆ ಪರಿಹಾರ ನೀಡಿದ್ದಿರಿ ಆದರೆ ಇವುಗಳನ್ನು ತಿನುವುದಕ್ಕೆ ಜೊತೆಗೆ ರೊಟಿ ಬೇಕಲ್ಲ ಅಂತಹ ಜೇೂಳ ಬೆಳೆಯುವವರಿಗೆ ಪ್ರೋತ್ಸಾಹ ನೀಡಿಲ್ಲಾಂದ್ರೆ ಹೇಗೆ ಕಲ್ಯಾಣ ಕರ್ನಾಟಕದ ಪ್ರದೇಶದಲ್ಲಿ ತೊಗರಿ,ಕಡ್ಲಿ ನಂತರ ಹೆಚ್ಚು ಬೇಳೆಯುವುದೇ ಜೇೂಳ.ಹಾಗಾಗಿ ಜೇೂಳ ಬೆಳೆಯುವ ರೈತರಿಗೂ ಮೇಕ್ಕೆಜೇೂಳ ಬೆಳೆಯುವ ರೈತರಿಗೆ ರೂ 5000/- ಪ್ರೋತ್ಸಾಹ ಧನ ನೀಡಿದ್ದಿರಿ ಅದೆ ರೀತಿಯಲ್ಲಿ ಜೇೂಳ ಬೆಳೆಯುವ ರೈತರಿಗೂ ಪ್ರೋತ್ಸಾಹ ಧನ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ರೈತರ ಪರವಾಗಿ ಒತ್ತಾಯಿದ್ದಾರೆ.