ಕ್ಷೌರಿಕರಿಗೆ ಆಹಾರಧಾನ್ಯಗಳ ಕಿಟ್ ವಿತರಣೆ

0
36

ಕಲಬುರಗಿ: ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಹಡಪದ ಮತ್ತು ಸವಿತಾ ಸಮಾಜದ ಕ್ಷೌರಿಕರಿಗೆ ರವಿವಾರ ಲೋಕಸಭಾ ಸದಸ್ಯ ಡಾ.ಉಮೇಶ ಜಾಧವ ಅವರು ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಅವರಣದಲ್ಲಿ ಆಹಾರಧಾನ್ಯಗಳ ಕಿಟ್ ವಿತರಣೆ ಮಾಡುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಿದರು.

1200 ರೂ.ಗಳ ಬೆಲೆಯ ಈ ಕಿಟ್ ನಲ್ಲಿ 4 ಕೆ.ಜಿ.ಅಕ್ಕಿ, 5 ಕೆ.ಜಿ.ಗೋಧಿ, ತಲಾ 2 ಕೆ.ಜಿ. ತೊಗರಿ ಬೇಳೆ ಮತ್ತು ಸಕ್ಕರೆ, 1 ಕೆ.ಜಿ. ಅಡುಗೆ ಎಣ್ಣೆ, ತಲಾ 1 ಕೆ.ಜಿ. ಖಾರಾ ಮತ್ತು ಉಪ್ಪು, ತಲಾ 100 ಗ್ರಾಂ ಅರಶಿನ, ಜೀರಿಗೆ ಮತ್ತು ಟೀ ಪೌಡರ್ ಅಲ್ಲದೆ ಸಾಬೂನು, ಟೂಥ್ ಬ್ರಶ್, ಪ್ಯಾರಾಶೂಟ್ ಎಣ್ಣೆ ಒಳಗೊಂಡಿದೆ.

Contact Your\'s Advertisement; 9902492681

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಮೇಶ ಸಂಗಾ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳ‌ ನಿರ್ದೇಶನದಂತೆ ಈಗಾಗಲೆ ಜಿಲ್ಲೆಯಾದ್ಯಂತ ಕ್ಷೌರಿಕರಿಗೆ ಆಹಾರಧಾನ್ಯಗಳ ಕಿಟ್ ವಿತರಣೆ ಕಾರ್ಯ ನಡೆಯುತ್ತಿದ್ದು, ಎರಡು ದಿನದಲ್ಲಿ‌ ಒಟ್ಟಾರೆ 1775 ಕ್ಷೌರಿಕ ಕುಟುಂಬಗಳಿಗೆ ಕಿಟ್ ವಿತರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ವಿಧಾನ ಪರಿಷತ್ ಶಾಸಕರಾದ ಬಿ.ಜಿ.ಪಾಟೀಲ, ತಿಪ್ಪಣಪ್ಪ ಕಮಕನೂರ, ಜಿಲ್ಲಾ‌ ಹಡಪದ ಸಮಾಜದ ಅಧ್ಯಕ್ಷ ಈರಣ್ಣಾ ಹಡಪದ ಸಣ್ಣೂರ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಸುಭಾಷ ಬಾದಾಮಿ ಸೇರಿದಂತೆ ಸವಿತಾ ಮತ್ತು ಹಡಪದ ಸಮಾಜದ ಬಾಂಧವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here