ಸುರಪುರ ನಗರದ ಮಾರುಕಟ್ಟೆಯಲ್ಲಿ ಜನ ಜಂಗುಳಿ: ಲೆಕ್ಕಕ್ಕಿಲ್ಲದ ಲಾಕ್‍ಡೌನ್

0
32

ಸುರಪುರ: ಕೊರೊನಾ ಎಲ್ಲೆಡೆ ರಣಕೇಕೆ ಹಾಕುತ್ತಿದ್ದು ಸುರಪುರ ನಗರದ ಆಸರ ಮೊಹಲ್ಲಾದ ಇಬ್ಬರಲ್ಲಿ ಕೊರೊನಾ ಸೊಂಕು ದೃಢಪಟ್ಟು ನಗರದ ಜನರಲ್ಲಿ ಭಯ ಮೂಡಿಸಿದೆ. ಇದರಿಂದ ಜಿಲ್ಲಾಧಿಕಾರಿಗಳು ಆಸರ ಮೊಹಲ್ಲಾವನ್ನು ಕಾಂಟೋನ್ಮೆಂಟ್ ಝೋನ್ ಎಂದು ಘೋಷಿಸಿ ಇಲ್ಲಿಯ ಜನರು ಮನೆಯಿಂದ ಹೊರಗೆ ಬರದಂತೆ ಹಾಗು ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವಂತೆ ಆದೇಶ ಮಾಡಿದ್ದರು.

ಅಲ್ಲದೆ ಆಸರ ಮೊಹಲ್ಲಾದಿಂದ ಸುತ್ತಲೂ 5 ಕಿ.ಮಿ ಬಫರ್ ಝೋನ್ ಎಂದು ಘೋಷಿಸಲಾಗಿದೆ.ಇದಲ್ಲದೆ ಲಾಕ್‍ಡೌನ್ ಜಾರಿಯಲ್ಲಿದ್ದು ಜನರು ಅನಾವಶ್ಯಕವಾಗಿ ಹೊರಗೆ ತಿರುಗಾಡದಂತೆ ಪೊಲೀಸ್ ಇಲಾಖೆ ಹಾಗು ನಗರಸಭೆಯ ಸಿಬ್ಬಂದಿ ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದಾರೆ.ಆದರೆ ಜನರು ಮಾತ್ರ ಇದಕ್ಕೂ ತಮಗೂ ಸಂಬಂಧವಿಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ.

Contact Your\'s Advertisement; 9902492681

ನಗರದ ವಿವಿಧೆಡೆಗಳಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ,ಹಣ್ಣು ಹಂಪಲು ಹಾಲು ಮಾರಾಟಕ್ಕೂ ವ್ಯವಸ್ಥೆ ಮಾಡಲಾಗಿದೆ.ಅಲ್ಲದೆ ನಗರದ ವಿವಿಧ ಭಾಗಗಳಲ್ಲಿ ಕಿರಾಣಿ ಅಂಗಡಿಗಳೂ ಕೂಡ ತೆಗೆದಿರುತ್ತವೆ.ಆದರೆ ಜನರು ಮಾತ್ರ ಈ ಮುಂಚೆಯ ಮಾರುಕಟ್ಟೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿ ಜನ ದಟ್ಟಣೆ ನಿರ್ಮಿಸುತ್ತಿದ್ದಾರೆ.ಇದರಿಂದ ಲಾಕ್‍ಡೌನ್ ನಿಯಮ ಕೂಡ ಲೆಕ್ಕಕ್ಕಿಲ್ಲದಂತಾಗಿದೆ. ಅನವಾಶ್ಯಕವಾಗಿ ಜನರು ಸೇರುವ ಮೂಲಕ ನಗರದ ಜನರಲ್ಲಿ ಭಯದ ವಾತಾವರಣೆ ಸೃಷ್ಟಿಸುತ್ತಿರುವಂತಿದೆ.

ಈಗಾಗಲೆ ಇಬ್ಬರಲ್ಲಿ ಕೊರೊನಾ ಸೊಂಕಿನಿಂದ ನಗರದ ಜನರು ಭಯದಲ್ಲಿದ್ದೇವೆ ಈಗ ಸಾವಿರಾರು ಜನ ಗುಳೆ ಹೋಗಿ ಬಂದಿದ್ದಾರೆ ಅವರಲ್ಲಿ ಯಾರಿಗೆ ಸೊಂಕಿದೆಯೋ ತಿಳಿದಿಲ್ಲ.ಆದ್ದರಿಂದ ಜಿಲ್ಲಾಧಿಕಾರಿಗಳು ಮತ್ತು ತಹಸೀಲ್ದಾರರು ಅನಾವಶ್ಯಕ ಜನರ ಓಡಾಟಕ್ಕೆ ಬ್ರೇಕ್ ಹಾಕಬೇಕೆಂದು ಆಗ್ರಹಿಸುತ್ತೇವೆ. -ರಾಹುಲ್ ಹುಲಿಮನಿ ಮೂಲನಿವಾಸಿ ಅಂಬೇಡ್ಕರ್ ಸೇನೆ ರಾಜ್ಯ ಪ್ರ.ಕಾರ್ಯದರ್ಶಿ

ಈಗಾಗಲೆ ನಗರದ ಇಬ್ಬರಲ್ಲಿ ಕೊರೊನಾ ಸೊಂಕು ದೃಢವಾಗಿ ಜನರು ಭಯದಲ್ಲಿದ್ದಾರೆ.ಅಲ್ಲದೆ ವಲಸೆ ಹೋಗಿ ಬಂದಿರುವ ತಾಲೂಕಿನ ಸಾವಿರಾರು ಜನರಲ್ಲಿ ಯಾರಿಗೆ ಕೊರೊನಾ ಸೊಂಕಿದೆಯೋ ಎಂದು ಸದಾಕಾಲ ಚಿಂತೆಗೀಡು ಮಾಡಿದೆ.ಇದರ ಮದ್ಯೆ ಜನರು ಹೀಗೆ ಬೇಕಾಬಿಟ್ಟಿಯಾಗಿ ಓಡಾಡುತ್ತಿರುವುದು ನಿಜಕ್ಕೂ ಆತಂಕಕಾರಿಯಾಗಿದೆ.ಇದಕ್ಕೆ ಜಿಲ್ಲಾ ಮತ್ತು ತಾಲೂಕು ಆಡಳಿತ ಕಡಿವಾಣ ಹಾಕಬೇಕಿರುವುದು ಅವಶ್ಯಕವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here