ಶಹಾಬಾದ: ಭೋವಿ ವಡ್ಡರ್ ಸಮಾಜಕ್ಕೆ ಮುಖ್ಯಮಂತ್ರಿಗಳು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಆಗ್ರಹಿಸಿ ನಗರದ ಭೋವಿ ವಡ್ಡರ್ ಹಿತ ರಕ್ಷಣಾ ಸಮಿತಿಯಿಂದ ಉಪತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ಭೋವಿ ವಡ್ಡರ್ ಸಮಾಜದ ಹಿಂದುಳಿದ ಸಮಾಜವಾಗಿದ್ದು, ಬಹುತೇಕರು ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುವವರು ಹಾಗೂ ಕಲ್ಲು ಓಡೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಲಾಕ್‍ಡೌನ್ ಆಗಿದ್ದಾಗಿನಿಂದಲೂ ಇದ್ದ ಅಲ್ಪ ಸ್ವಲ್ಪ ಹಣ ಖಾಲಿಯಾಗಿದೆ. ಇತ್ತ ಕೆಲಸವಿಲ್ಲದೇ ಒಂದು ಹೊತ್ತು ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೂಡಲೇ ಬೇರೆ ಜನಾಂಗಕ್ಕೆ ಘೋಷಣೆ ಮಾಡಿದ ಹಾಗೇ ನಮ್ಮ ಭೋವಿ ವಡ್ಡರ್ ಜನಾಂಗಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವುದರ ಮೂಲಕ ಸಹಾಯ ಹಸ್ತ ಚಾಚಬೇಕೆಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.
ಭೋವಿ ವಡ್ಡರ್ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಕಳ್ಳೋಳ್ಳಿ ಬಲಭೀಮ ಕುಸಾಳೆ,ರಾಜೇಶ ಭರಮಣ್ಣ ದಂಡಗುಲಕರ್, ರಾಮು ಕುಸಾಳೆ,ದೇವು ಮೈಂದರ್ಗಿ,ಅಂಬಾದಾಸ ಪವಾರ,ರವಿಕುಮಾರ ದಂಡಗುಲಕರ್, ರಾಮುಮುದ್ದಗಲೋರ್,ಅಮರನಾಥ ನಗನೂರ್,ಚಂದ್ರಕಾಂತ ಖೇತ್ರೆ ಇತರರು ಇದ್ದರು.