ಶಹಾಪುರ: ಕೋರನ ವೈರಸ್ ಕೊವಿಡ್ – 19 ಮಹಾಮಾರಿ ರೋಗದಿಂದ ಸುರಕ್ಷಿತವಾಗಿರಲು ಭೀಮರಾಯನಗುಡಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಾಜಕುಮಾರ ಜಾಮಗೊಂಡ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ಮಾಸ್ಕ್ ಕಡ್ಡಾಯವೆಂದು ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಕಟ್ಟುನಿಟ್ಟಿನ ಆದೇಶವಿದ್ದರೂ ಕೂಡ ಕೆಲವೊಂದಿಷ್ಟು ಜನ ಮಾಸ್ಕ್ ಧರಿಸದೇ ಭೀಮರಾಯನಗುಡಿಯ ಬೀದರ್ ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಓಡಾಡುತ್ತಿರುವುದನ್ನು ಕಂಡು ಸಾರ್ವಜನಿಕರಿಗೆ ಹಾಗೂ ಬೈಕ್ ಸವಾರರಿಗೆ ಮಾಸ್ಕ್ ವಿತರಣೆ ಮಾಡಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು,ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಾಕೀತು ಮಾಡಿದರು.
ಸದಾ ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಪಿಎಸ್ಐ ರಾಜಕುಮಾರ್ ಜಮಾಗೊಂಡ ಅವರು ಕಳೆದ ತಿಂಗಳು ತಮ್ಮ ಒಂದು ತಿಂಗಳ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.ಅಲ್ಲದೆ ಸುಮಾರು 15 ದಿನಗಳ ಕಾಲ ಬಡವರಿಗೆ,ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡಿದ್ದರು ಸದ್ಯಕ್ಕೆ ಸಾರ್ವಜನಿಕರಿಗೆ ಮಾಸ್ಕ್ ವಿತರಣೆ ಕಾರ್ಯದಲ್ಲಿ ತೊಡಗಿದ್ದಾರೆ ನಿಜಕ್ಕೂ ಇವರ ಕಾರ್ಯ ಶ್ಲಾಘನೀಯವಾದದ್ದು.