ಸುರಪುರ: ಜಿಲ್ಲಾ ಪಂಚಾಯತಿ ಯಾದಗಿರಿ ಹಾಗು ಭಾರತೀಯ ಜೈನ ಸಂಘಟನೆ ಸಹಯೋಗದಲ್ಲಿ ತಾಲೂಕಿನ ಬೈರಿಮಡ್ಡಿಯ ಭೈರಿ ಕೆರೆಯ ನಾಲಾ ಹೂಳೆತ್ತುವ ಕಾಮಗಾರಿಗೆ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಾ ಹನಮಪ್ಪ ನಾಯಕ (ತಾತಾ) ಚಾಲನೆ ನೀಡಿದರು.
ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು,ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಾಲಾ ಹೂಳೆತ್ತುವ ಕಾಮಗಾರಿಗೆ ಇಂದು ಸಮಯ ಕೂಡಿ ಬಂದಿದ್ದು.ಜಿಲ್ಲಾ ಪಂಚಾಯತಿ ಮತ್ತು ಭಾರತೀಯ ಜೈನ ಸಂಘಟನೆ ಸಹಕಾರ ಅಮೂಲ್ಯವಾಗಿದೆ.ಈ ಕಾಮಗಾರಿಯಿಂದ ಕೆರೆಯ ಸುತ್ತಲ ಅನೇಕ ರೈತರ ಜಮೀನುಗಳಿಗೆ ನೀರು ಒದಗಲಿದ್ದು,ರೈತರು ಇದರ ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ದೊಡ್ಡ ದೇಸಾಯಿ ದೇವರಗೋನಾಲ,ಬಲಭೀಮ ನಾಯಕ ಬೈರಿಮಡ್ಡಿ,ಗ್ರಾಮ ಪಂಚಾಯತಿ ಅಧ್ಯಕ್ಷರಾದ ದ್ಯಾವಮ್ಮ ಸವಳಪಟ್ಟಿ,ಸಣ್ಣ ದೇಸಾಯಿ ದೇವರಗೋನಾಲ,ಶರಣು ನಾಯಕ ಬೈರಿಮಡ್ಡಿ,ಇಂಜಿನಿಯರ್ ಸುಭಾನ ಅಲಿ,ಭಾರತೀಯ ಜೈನ ಸಂಘಟನೆ ತಾಲೂಕು ಸಂಚಾಲಕ ವೆಂಕಟೇಶ ಎಮ್.ದೇವಾಪುರ,ಗ್ರಾಮ ಪಂಚಾಯತ ಸದಸ್ಯ ವೆಂಕಟೇಶ ನಾಯಕ ಬೈರಿಮಡ್ಡಿ,ಮಲ್ಲರಡ್ಡಿ ಬನ್ನೆಟ್ಟಿ,ಹಣಮಗೌಡ ಶಖಾಪುರ,ರಾಮಣ್ಣ ದೊರೆ, ರವಿಕುಮಾರ ನಾಯಕ ಬೈರಿಮಡ್ಡಿ, ಗ್ರಾಮದ ಮುಖಂಡರಾದ,ಹೊನ್ನಪ್ಪ ಸವಳಪಟ್ಟಿ,ದೇವಪ್ಪ ಮಾಚಗುಂಡಾಳ,ಮಂಜು ನಾಯಕ,ಭಾಗಪ್ಪ ಗೌಂಡಿ,ಮಲ್ಲಪ್ಪ ಬನ್ನೆಟ್ಟಿ,ಅಂಬ್ರೇಶ ನಾಯಕ,ಆನಂದ ಮಾಚಗುಂಡಾಳ,ಬಲಭೀಮ ಬಾದ್ಯಾಪುರ,ಪರಶುರಾಮ ಗೋಸಿ ಸೇರಿದಂತೆ ಅನೇಕರಿದ್ದರು.