ಸುರಪುರದಲ್ಲಿ ಮತ್ತೆ ನಾಲ್ವರಿಗೆ ಕೊರೊನಾ ಪಾಸಿಟಿವ್,ಜನರಲ್ಲಿ ಹೆಚ್ಚಿದ ಆತಂಕ

0
217

ಸುರಪುರ: ಕೊರಾನಾ ವೈರಸ್ ಅಟ್ಟಹಾಸ ಹಸಿರು ವಲಯ ಯಾದಗಿರಿ ಜಿಲ್ಲೆಯ ಸುರಪುರ ಆಸರ್ ಮೊಹಲ್ಲಾಕ್ಕೆ ಇದೇ ಮೇ 11 ರಂದು ಲಗ್ಗೆ ಇಟ್ಟಿತ್ತು. ಇಂದು ನಗರದ ವಸತಿ ನಿಲಯದ ಕ್ವಾರಂಟೈನಲ್ಲಿರುವ ತಾಯಿ-ಮಗುವಿಗೂ ಹಾಗೂ ಲಾಡ್ಜ್ ನ್ ಕ್ವಾರಂಟೈನ್ ಲ್ಲಿರುವ ತಾಯಿ-ಮಗಳಿಗೂ ಸೇರಿ ಒಟ್ಟು ನಾಲ್ವರಿಗೆ ಕೊರಾನಾ ವೈರಸ್ ಪಾಸಿಟಿವ್ ದೃಢ ಪಟ್ಟಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ:ರಾಜಾ ವೆಂಕಪ್ಪನಾಯಕ ಅವರು ತಿಳಿಸಿದ್ದಾರೆ.

ಸುರಪುರ ನಗರ ವ್ಯಾಪ್ತಿಯ ದೀವಳಗುಡ್ಡದ ಕುಟುಂಬವೊಂದು ಮಹಾರಾಷ್ಟ್ರ ದಿಂದ ಇದೇ 14 ರಂದು ಹಿಂದಿರುಗಿ ಬಂದಿರುವ ಪತಿ-ಪತ್ನಿ ಮಗು ಮೂವರಲ್ಲಿ ಇಂಜನಿಯರ್ ಆಗಿರುವ 27 ವರ್ಷದ ಗರ್ಭಿಣಿ ಹಾಗೂ ಆಕೆಯ 4 ವರ್ಷದ ಹೆಣ್ಣು ಮಗುವಿಗೂ ಪಾಸಿಟಿವ್ ಬಂದಿದೆ.ಆದರೆ ಆಕೆಯ ಪತಿಗೆ ನೆಗಟಿವ್ ಬಂದಿದೆ ಇವರು ಲಾಡ್ಜ್ ವೊಂದರ್ ಕ್ವಾರಂಟೈನ್ ಲ್ಲಿದ್ದರು.

Contact Your\'s Advertisement; 9902492681

ಶಹಾಪೂರ ತಾಲೂಕಿನ ಗೋಗಿ ಗ್ರಾಮದ ಬಾಣಂತಿ ಹಾಗೂ 8 ತಿಂಗಳ ಗಂಡು ಕೂಸಿಗೂ ಪಾಸಿಟಿವ್ ಬಂದಿದೆ ಇವರೂ ಕೂಡಾ ಮಹಾರಾಷ್ಟ್ರದಿಂದ ಇದೇ 12 ರಂದು ಹಿಂದಿರುಗಿದ್ದರು, ಈಕೆಯನ್ನೂ ನಗರದ ವಸತಿ ನಿಲಯ ಕೇಂದ್ರದ ಕ್ವಾರಂಟೈನ್ ಕೇಂದ್ರದಲ್ಲಿ ಇಡಲಾಗಿತ್ತು. ಈಗ ಇವರೆಲ್ಲರನ್ನೂ ಯಾದಗಿರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈಗಾಗಲೆ ವಸತಿನಿಲಯದಲ್ಲಿರುವವರಲ್ಲಿ ಪಾಸಿಟಿವ್ ಕಾಣಿಸಿದ್ದರಿಂದ ಇವರಿದ್ದ ವಸತಿ ನಿಲಯದಲ್ಲಿನ 108 ಜನರಿಗೂ ಕ್ವಾರಂಟೈನ್ ಮುಂದುವರೆಯಲಿದೆ ಎಂದು ಟಿಹೆಚ್‌ಒ ತಿಳಿಸಿದ್ದಾರೆ.

ಈಗಾಗಲೆ ಅಹಮದಾಬಾದ್‌ನಿಂದ ಬಂದ ಕುಟುಂಬವೊಂದರ ಇಬ್ಬರಿಗೆ ಪಾಸಿಟಿವ್ ಬಂದ ನಂತರ ಬೆಚ್ಚಿ ಬಿದ್ದಿದ್ದ ನಗರದ ಜನತೆ ಈಗ ಮತ್ತೆ ನಾಲ್ವರಲ್ಲಿ ಕಾಣಿಸಿಕೊಂಡಿದ್ದರಿಂದ ಜನರು ಮತ್ತಷ್ಟು ಭಯಭೀತರಾಗಿದ್ದಾರೆ.

ಯಾದಗಿರಿ ಜಿಲ್ಲೆಯಲ್ಲಿ ಶನಿವಾರ ಮುಂಬೈ ಕೋರಾನಾ ಸ್ಪೋಟ್ ಗೊಂಡು ಒಂದೇ ದಿನ 72 ಪಾಸಿಟಿವ್ ಬಂದು ತಲ್ಲಣಗೊಳಿಸಿತ್ತು. ಇಂದು ಬೆಳಗ್ಗೆ 6 ಸಂಜೆ 18 ಸೇರಿ ಒಟ್ಟು 24 ಪಾಸಿಟಿವ್ ಪ್ರಕರಣದಿಂದ ಜಿಲ್ಲೆಯಲ್ಲಿ ಒಟ್ಟು 111 ಜನರಿಗೆ ಸೋಂಕು ದೃಢವಾದ ಬಗ್ಗೆ ವರದಿಯಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here