ಮೈಸೂರು ವಿಮಾನ ನಿಲ್ದಾಣ ಕಾರ್ಯಾರಂಭ: ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

0
59

ಮೈಸೂರು: ಕೊರೋನಾ ಭೀತಿಗೆ ಸ್ಥಗಿತಗೊಂಡಿದ್ದ ವಿಮಾನಯಾನ ಸೇವೆ ದೇಶದೆಲ್ಲೆಡೆ ಮತ್ತೆ ಆರಂಭವಾಗುತ್ತಿದೆ. ಅದೇ ರೀತಿ ಮೈಸೂರು ವಿಮಾನ ನಿಲ್ದಾಣದಲ್ಲೂ ನಿನ್ನೆಯಿಂದ ಲೋಹದ ಹಕ್ಕಿಗಳ ಹಾರಾಟ ಪ್ರಾರಂಭವಾಗಿದ್ದು, ಇದು ಸಾರ್ವಜನಿಕರಲ್ಲಿ ಕೊರೋನಾ ಭೀತಿಯನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ.

ಕಳೆದ 2 ತಿಂಗಳಿಂದ ಸ್ಥಗಿತಗೊಂಡಿದ್ದ ವಿಮಾನಯಾನ ಸೇವೆಯು ದೇಶದ ಒಳಗೆ ಸೋಮವಾರದಿಂದ ಕಾರ್ಯರಂಭಗೊಂಡಿದ್ದು, ದೇಶದಲ್ಲಿ ಕಿಲ್ಲರ್ ಕೊರೋನಾ ತನ್ನ ಜಾಲವನ್ನು ವಿಸ್ತರಿಸಿಕೊಳ್ಳುತ್ತಿದ್ದರು ಕೇಂದ್ರ ಸರ್ಕಾರ ಲೋಹದ ಹಕ್ಕಿಗಳ ಹಾರಾಟಕ್ಕೆ ಅನುಮತಿ ನೀಡಿರುವುದು ಸಹಜವಾಗಿಯೇ ಆತಂಕ ಸೃಷ್ಟಿಸಿದೆ. ಅದೇ ರೀತಿ ಮೈಸೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲೋಹದ ಹಕ್ಕಿಗಳ ಕಲರವ ಸೋಮವಾರದಿಂದ ಪ್ರಾರಂಭವಾಗಿತ್ತು. ಆದರೆ ಅಂತರ್ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದ ನಿನ್ನೆಯ ಸಂಚಾರದಲ್ಲಿ ಬೆಂಗಳೂರು ಮೈಸೂರು ನಡುವೆ ಒಂದು ವಿಮಾನ ಸಂಚರಿಸಿದ್ದರೆ, ಬೆಳಗಾವಿಗೆ ಹೋಗಬೇಕೆದ್ದ ವಿಮಾನಕ್ಕೆ ಯಾವುದೇ ಟಿಕೆಟ್ ಬುಕ್ಕಿಂಗ್ ಆಗಿಲ್ಲವಾದರಿಂದ ನಿಂತಲ್ಲೆ ನಿಂತಿತ್ತು.

Contact Your\'s Advertisement; 9902492681

ನಿನ್ನೆ ಅಂತರ್ ಜಿಲ್ಲೆಗಳಗೆ ಮಾತ್ರ ನಿನ್ನೆ ಸೇವೆ ಒದಗಿಸಿದ್ದ ಮೈಸೂರು ವಿಮಾನ ನಿಲ್ದಾಣ ಇಂದು ಅಂತರ್ ರಾಜ್ಯಕ್ಕೂ ವಿಮಾನ ಸೇವೆ ಪ್ರಾರಂಭಿಸಿದೆ. ನೆರೆಯ ಆಂದ್ರಪ್ರದೇಶ ಮತ್ತು ಕೇರಳಾ ರಾಜ್ಯಗಳ ನಡುವೆ ವಿಮಾನ ಸಂಚಾರ ಆರಂಭಿಸಿದ್ದು, ಇಂದು ಬೆಳಿಗ್ಗೆ ಹೈದ್ರಾಬಾದ್ ನಿಂದ 9.15 ಮೈಸೂರಿಗೆ ಒಂದು ಪ್ಲೈಟ್ ಆಗಮಿಸಿದರೆ, 9.55ಕ್ಕೆ ಮೈಸೂರಿನಿಂದ ಕೊಚ್ಚಿನ್ ಗೆ ಮತ್ತೊಂದು ವಿಮಾನ ಹೊರಟಿದೆ. ಸಮಾಧಾನದ ವಿಷಯ ಏನೆಂದರೆ ಕೊರೋನಾ ರುದ್ರತಾಂಡವ ಆಡುತ್ತಿರುವ ತಮಿಳುನಾಡು, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಐದು ರಾಜ್ಯಗಳಿಗೆ ಸದ್ಯಕ್ಕೆ ವಿಮಾನ ಸೇವೆ ಶುರುವಾಗಿಲ್ಲ.

ಆದರೇ ಕೊರೋನಾ ಭೀತಿಗೆ ಗದ್ಗದಿಸಿದ್ದ ಮೈಸೂರು ಈಗ ತಾನೇ ಅದರ ಭಯದಿಂದ ಹೊರಗಡೆ ಬಂದಿದ್ದು, ಈಗ ಮತ್ತೇ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಲೋಹದ ಹಕ್ಕಿಗಳು ತಮ್ಮ ಕಾರ್ಯರಂಭ ಮಾಡಿರುವುದು ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗುವಂತೆ ಮಾಡಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here