ಸುರಪುರ: ಇಂದು ಎಲ್ಲರು ಕೊರೊನಾ ಎಂಬ ಹೆಸರು ಕೇಳಿದರೆ ಭಯ ಪಡುತ್ತಿದೇವೆ.ಆದರೆ ಕೊರೊನಾ ವಾರಿಯರ್ಸ್ ಯಾವುದಕ್ಕೂ ಹೆದರದೆ ಅವಿರತ ಸೇವೆ ಸಲ್ಲಿಸುವ ಅವರ ಸೇವೆ ಅಮೋಘವಾದುದಾಗಿದೆ ಎಂದು ತಾಲೂಕು ಅಕ್ಷರ ದಾಸೋಹದ ಅಧಿಕಾರಿ ಮೌನೇಶ ಕಂಬಾರ ಮಾತನಾಡಿದರು.
ತಾಲೂಕಿನ ಅನೇಕ ಕ್ವಾರಂಟೈನ್‍ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಡುಗೆ ಸಹಾಯಕಿಯರು,ನರ್ಸ್,ಗ್ರಾಮ ಪಂಚಾಯತಿ ಸಿಬ್ಬಂದಿ,ಆರಕ್ಷಕ ಸಿಬ್ಬಂದಿಗಳಿಗೆ ಸನ್ಮಾನಿಸಿ ಮಾತನಾಡಿ,ಕ್ವಾರಂಟೈನ್ ಕೇಂದ್ರದಲ್ಲಿ ಸೇವೆ ಸಲ್ಲಿಸುವವರಿಗೆ ಯಾವ ಸಂದರ್ಭದಲ್ಲಿ ಬೇಕಾದರು ಸೊಂಕು ತಗುಲಬಹುದು. ಆದರೆ ಇಲ್ಲಿ ಕೆಲಸ ಮಾಡುವ ಯಾರುಕೂಡ ತಮ್ಮ ಜೀವದ ಬಗ್ಗೆ ಕಾಳಜಿ ಬಿಟ್ಟು ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿದ್ದಾರೆ.ಇವರ ಸೇವೆಯನ್ನು ನಾವೆಲ್ಲರು ಸ್ಮರಿಸಲೆಬೇಕಿದೆ.ಅಕ್ಷರ ದಾಸೋಹದ ಸಿಬ್ಬಂದಿಗಳು,ಶಿಕ್ಷಕರು,ಆರೋಗ್ಯ ಇಲಾಖೆ ಸಿಬ್ಬಂದಿ,ಪೊಲೀಸ್ ಇಲಾಖೆ ಸಿಬ್ಬಂದಿ ಎಲ್ಲರು ಹೋರಾಟಗಾರರೆ ಆಗಿದ್ದಾರೆ. ಆದ್ದರಿಂದ ಇಂದು ಅಕ್ಷರ ದಾಸೋಹ ಇಲಾಖೆ,ಅನೇಕ ಗ್ರಾಮಗಳ ಶಿಕ್ಷಕರು ಮತ್ತು ಗ್ರಾಮ ಪಂಚಾಯತಿಗಳ ಸಹಕಾರದಲ್ಲಿ ತಾಲೂಕಿನ ಎಲ್ಲಾ ಕ್ವಾರಂಟೈನ್ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಗೌರವಿಸಲಾಗುತ್ತಿದೆ ಎಂದರು.
ತಾಲೂಕಿನ ತಿಂಥಣಿ ದೇವಾಪುರ ಬೆನಕನಹಳ್ಳಿ ಬಲಶೆಟ್ಟಿಹಾಳ ಗೆದ್ದಲಮರಿ ಸೇರಿದಂತೆ ತಾಲೂಕಿನ ಎಲ್ಲಾ ಕ್ವಾರಂಟೈನ್‍ಗಳಲ್ಲಿ ಸೇವೆ ಸಲ್ಲಿಸುವವರಿಗೆ ಶಾಲು ಹೊದಿಸಿ,ಪುಷ್ಪ ವೃಷ್ಟಿ ಮಾಡಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ತಿಂಥಣಿ ಪಿಡಿಒ ಡಿ.ಎನ್.ಹಳ್ಳಿ,ಶಿಕ್ಷಕರಾದ ಶರಣಬಸವ ಮಂಜುನಾಥ ಮಲ್ಲಪ್ಪ ಭೀಮಣ್ಣ ವೀರಣ್ಣ ಬೆಳ್ಳುಬ್ಬಿ ಸೇರಿದಂತೆ ಅನೇಕರಿದ್ದರು.