ಭಾರತೀಯ ಸ್ಟೇಟ್ ಬ್ಯಾಂಕ್‍ಲ್ಲಿ ಕನ್ನಡ ಬಳಕೆಗೆ ನವ ನಿರ್ಮಾಣ ಸೇನೆ ಒತ್ತಾಯ

0
66

ಸುರಪುರ: ಇಂದು ಎಲ್ಲೆಡೆ ಕನ್ನಡ ಕೊಲ್ಲುವ ಕೆಲಸ ನಡೆಯುತ್ತಿದೆ.ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದೆ.ಆದರೆ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಗಳಲ್ಲಿ ಕನ್ನಡವನ್ನು ಕೊಲ್ಲುವ ಕೆಲಸ ನಡೆಯುತ್ತಿದೆ.ಇದನ್ನು ಕರ್ನಾಟಕ ನವ ನಿರ್ಮಾಣ ಸೇನೆ ಖಂಡಿಸುತ್ತದೆ ಎಂದು ಭಾಸ್ಕರಗೌಡ ಯಾಳಗಿ ಮಾತನಾಡಿದರು.

ನಗರದ ಎಸ್‍ಬಿಐ ಶಾಖೆ ಮುಂದೆ ಸಾಂಕೇತಿಕ ಪ್ರತಿಭಟನೆ ಮೂಲಕ ಸರಕಾರಕ್ಕೆ ಒತ್ತಾಯಿಸಿ ಎಸ್‍ಬಿಐ ಶಾಖೆಗಳಲ್ಲಿ ಗ್ರಾಹಕರಿಗೆ ನೀಡುವ ಎಲ್ಲಾ ನಮೂನೆಗಳಲ್ಲಿ ಹಾಗು ಚಲನ್ ಪ್ರತಿಗಳಲ್ಲಿಯೂ ಹಿಂದಿ ಮತ್ತು ಇಂಗ್ಲೀಷ ಭಾಷೆಗೆ ಆದ್ಯತೆ ನೀಡುವ ಮೂಲಕ ಕನ್ನಡ ದ್ರೋಹದ ಕೆಲಸ ನಡೆಯುತ್ತಿದೆ.ಇದನ್ನು ಖಂಡಿಸಿ ಹಾಗೂ ಎಲ್ಲಾ ನಮೂನೆ ಮತ್ತು ಚಲನ್ ಪ್ರತಿಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಬೇಕು,ಇದರಿಂದ ಅಲ್ಪ ಸ್ವಲ್ಪ ಅಕ್ಷರ ಬಲ್ಲವರಿಗೂ ಬ್ಯಾಂಕಿಂಗ್ ವ್ಯವಹಾರಕ್ಕೆ ಅನುಕೂಲವಾಗಲಿದೆ ಎಂದು ಆಗ್ರಹಿಸಿ ನಾಡಿನಾದ್ಯಂತ ಪ್ರತಿಭಟನೆ ಮೂಲಕ ಸರಕಾರ ಗಮನಕ್ಕೆ ತರಲಾಗುತ್ತಿದೆ ಎಂದರು.

Contact Your\'s Advertisement; 9902492681

ಬ್ಯಾಂಕ್ ಶಾಖೆಗಳಲ್ಲಿ ಕನ್ನಡ ಬಳಸಲು ಇಲ್ಲಿಯ ಶಾಖೆಯ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲು ಹೋದರೆ ವ್ಯವಸ್ಥಾಪಕರು ಕೂಡ ಅನುಚಿತ ವರ್ತನೆ ತೋರುವ ಮೂಲಕ ಕನ್ನಡ ಮತ್ತು ಕನ್ನಡಿಗರನ್ನು ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿ,ವ್ಯವಸ್ಥಾಪಕರ ಮೇಲೆ ಕ್ರಮಕ್ಕೆ ಒತ್ತಾಯಿಸುವುದಾಗಿ ನುಡಿದರು.ಈ ಸಂದರ್ಭದಲ್ಲಿ ಚಂದ್ರು ಯಾಳಗಿ ಸಂತೋಷ ಕೆಂಭಾವಿ ಶಿವು ಇಜೇರಿ ಕೆಂಭಾವಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here