- ಕಲಬುರಗಿ: ಶ್ರೀ ರಾಮಲಿಂಗ ಚೌಡೇಶ್ವರಿ ಸಂಸ್ಥೆ ವತಿಯಿಂದ ಬ್ರಹ್ಮ ಪೂರ್ ಬಡಾವಣೆಯಲ್ಲಿ ಶ್ರೀ. ಅಭಿನವ ಗುಪ್ತ ಜಯಂತಿ ಆಚರಿಸಿದರು.
11ನೇ ಶತಮಾನದಲ್ಲಿ ಕಾಶ್ಮೀರದ ಪಂಡಿತರೆಂದು ಖ್ಯಾತರಾಗಿ 11 ಮಹಾಕೃತಿ ಬರೆದಿದ್ದಾರೆ. ಶೈವ ಧರ್ಮದ ಪ್ರವರ್ತಕರು, ಸಂಸ್ಕೃತ ಸಾಹಿತ್ಯದಲ್ಲಿ ಮೇರು ಬರಹಗಳನ್ನು ರಚಿಸಿದ್ದಾರೆ. ಆಧ್ಯಾತ್ಮಿಕ ದಲ್ಲಿ ಉನ್ನತ್ತಿ ಸಾಧಿಸಲು ಕಾಶ್ಮೀರ ರಾಜ್ಯ ಅತಿ ಶ್ರೇಷ್ಠ ಸ್ಥಳ ವೆಂದು ಜಗತ್ತಿಗೇ ತೋರಿಸಿಕೊಟ್ಟಿದ್ದು, ಅರಿವೇ ಗುರು, ಜ್ಞಾನದ ಬೆಳಕು ಪ್ರತಿಯೊಬ್ಬರಿಗೂ ಎಂದು ಸಂಸ್ಥೆಯ ಅಧ್ಯಕ್ಷರಾದ ಶರಣಪ್ಪ ಜೇನವೇರಿ ಅಧ್ಯಕ್ಷತೆ ವಹಿಸಿ ತಿಳಿಸಿದರು.
ಈ ವೇಳೆಯಲ್ಲಿ ಸಂಸ್ಥೆಯ ಧರ್ಮದರ್ಶಿಗಳಾದ ಲಷ್ಮಿಕಾಂತ್, ವಿನೋದಕುಮಾರ, ಶರಣಪ್ರಸಾದ್, ಧರ್ಮಪ್ರಸಾದ್ ಇತರರು ಇದ್ದರು.