ಪರಿಸರ ಸ್ನೇಹಿ “ತಿಮ್ಮಕ್ಕಜ್ಜಿ”: ಇ- ಮೀಡಿಯಾ ಲೈನ್ ಕವಿತೆ

0
82

“ತಿಮ್ಮಕ್ಕಜ್ಜಿ”

ಸಾವಿರ ಸಾವಿರ ಮರಗಳನು
ಸಾಲು ಸಾಲು ನೆಟ್ಟು
ಸಾವಿರ ಕಾಲಕೂ ಮರೆಯದ
ಕಾಯಕ ಮಾಡಿದ
ಸಾಲು ಮರದ ತಿಮ್ಮಕ್ಕಜ್ಜಿ ಗೊತ್ತಾ..?

Contact Your\'s Advertisement; 9902492681

ಬಡತನ ಬೇಗೆ ಇದ್ದರು
ಬಡತನದಲ್ಲಿ ಬದುಕಲಿಲ್ಲ
ಸಿರಿತನವಂತು ಸುಳಿಯಲಿಲ್ಲ
ವನಸಿರಿಯಲ್ಲಿ ಸಿರಿತನ ತೋರಿದ
ಸಾಲು ಮರದ ತಿಮ್ಮಕ್ಕಜ್ಜಿ ಗೊತ್ತಾ..?

ಒಡಲಿನ ಮಕ್ಕಳು ಅವಳಿಗಿಲ್ಲ
ಹರಕೆ ಎಂದು ಬೇಡಲಿಲ್ಲ
ಹಸಿರಿನ ಮಕ್ಕಳು ನನ್ನವು
ವಂಶದ ಕುಡಿಗಳು ಮರಗಳೆ ಎನ್ನುವ
ಸಾಲು ಮರದ ತಿಮ್ಮಕ್ಕಜ್ಜಿ ಗೊತ್ತಾ..?

ಶಾಲೆ ನಮ್ಮಷ್ಟು ಕಲಿಯಲಿಲ್ಲ
ಉದ್ಯೋಗ ಅರ್ಜಿ ಹಾಕಲಿಲ್ಲ
ದನಗಳ ಕಾಯ್ದು ಕೂಲಿಯ ಮಾಡುತ
ಸಾವಿರ ಸಾವಿರ ಮರಗಳನೆಟ್ಟ
ಸಾಲು ಮರದ ತಿಮ್ಮಕ್ಕಜ್ಜಿ ಗೊತ್ತಾ..?

ಚಪ್ಪಲು ಕೊಳ್ಳಲು ದುಡ್ಡಿಲ್ಲ
ಪಂಪಿನ ಖರೀದಿಗೆ ಕಾಸಿಲ್ಲ
ಬಿಂದಿಗೆ ತಂದು ತಲೆಮೇಲೆ ಹೊತ್ತು
ಮೈಲು ಮೈಲು ಮರಗಳ ಬೆಳೆಸಿದ
ಸಾಲು ಮರದ ತಿಮ್ಮಕ್ಕಜ್ಜಿ ಗೊತ್ತಾ..?

ಕೈಯನು ಚಾಚಿ ಕೇಳಲಿಲ್ಲ
ಪ್ರಶಸ್ತಿಗೆ ಪತ್ರ ಬರೆಯಲಿಲ್ಲ
ಶುದ್ಧ ಮನಸ್ಸಿನ ಕಾಯಕ ಮಾಡಿ
ಪದ್ಮಶ್ರೀ ಮನೆಗೆ ಬಂದ
ಸಾಲು ಮರದ ತಿಮ್ಮಕ್ಕಜ್ಜಿ ಗೊತ್ತಾ..?

ಜನರಿಗೆ ಮತವ ಕೇಳಲಿಲ್ಲ
ಜಯಕಾರ ಹಾಕಲು ಹೇಳಲಿಲ್ಲ
ಹಕ್ಕಿಪಕ್ಕಿ ಹಸವಬಸವ ದಾರಿಹೊಕರ
ಮನದಲಿ ಚಿರಕಾಲ ಉಳಿದ
ಸಾಲು ಮರದ ತಿಮ್ಮಕ್ಕಜ್ಜಿ ಗೊತ್ತಾ..?

ಮಲಿಕಜಾನ ಶೇಖ
ಸೊಲ್ಲಾಪುರ ಮಹಾರಾಷ್ಟ್ರ

ಸಂಪರ್ಕ: 9423468808

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here