ಬಿಸಿ ಬಿಸಿ ಸುದ್ದಿಕಲೆ-ಕ್ರೀಡೆಸಾಹಿತ್ಯ ಒಡಲ ಅಳಲು: ಇ-ಮೀಡಿಯಾ ಲೈನ್ ಕವಿತೆ ಮೂಲಕ emedialine - June 5, 2020 0 57 Facebook Twitter Pinterest WhatsApp ಒಡಲ ಅಳಲು ಕೇಳು ನನ್ನ ಒಡಲ ಅಳಲು ನಿತ್ಯ ಕೊಡುವೆ ನಿನಗೆ ನೆಳಲು ಕಡಿಯದಿರು ನನ್ನ ಕೊರಳ ನಾನಿದ್ದರೆ ಬದುಕು ಸರಳ ಅತೀ ತೆಗೆಯದಿರು ಮರಳು ನೊಯ್ಯುತಿದೆ ಎದೆಯಾಳ ಮಾನವ ತುಂಬಾ ದುರುಳ ಬಗೆದು ಹಾಕಿಬಿಟ್ಟೆ ಕರಳ ನಿತ್ಯ ಹರಿವ ಹಳ್ಳ ನಾನು ವಿಷ ಸೇರಿಸಿ ಬಿಟ್ಟೆ ನೀನು ಮರೆತೇಕೆ ನೀನು ನನ್ನ ನಿನ್ನ ಜೀವ ಜಲವು ನಾನು ಕಡಿಬೇಡ ಹಸಿರನಿಂದು ಬಿಕ್ಕುವೆ ನೀ ನಾಳೆ ನೊಂದು ನೆಟ್ಟು ನೀರಾಕಿ ಬೆಳೆಸು ನೆರಳಾಗಿ ಜೊತೆಗೆ ಇರುವೆ ಕಾಡು ಬೆಳಸಿ ನೋಡೊ ಅಣ್ಣ ನಾಡು ಉಳಿಯುತೈತೊ ತಮ್ಮಾ ನಾಳೆ ನಿನ್ನ ವಂಶ ಬೆಳೆದು ನಿನ್ನ ಹೆಸರ ಬೆಳಗುತೈತಿ ರೆಕ್ಕೆ ಬಿಚ್ಚೋ ಹಕ್ಕಿ ನೋಡು ಉಲ್ಲಾಸ ನಿನ್ನ ಮನಕೆ ಸಂಜೆ ಅರಳೋ ಮಲ್ಲೆ ನೋಡು ಸಂತಸವು ನಯನಗಳಿಗೆ ನಿನ್ನುಸಿರ ಪಡೆದು ನನ್ನುಸಿರ ಕೊಡುವೆ ನಿನ್ನ ಬದುಕು ನಾನೆ ತಿಳಿಯೊ… ಮತಿಗೆಡಿಯಾಗಿ ಮರ ಕಡಿಯದಿರು ಮನುಕುಲಕೆ ನಾನೇ ಉಸಿರು. ಬಸವರಾಜ್ ಚೌಡ್ಕಿ ವಿಶ್ವ ಪರಿಸರ ದಿನದ ಪ್ರಯುಕ್ತ