ಶಹಾಪುರ : ಕೃಷಿ ಚಟುವಟಿಕೆಗಳು ಗರಿಗೆದರುವ ಮುಂಚೆ ಕಾರಹುಣ್ಣಿಮೆಯಂದು ಎತ್ತುಗಳಿಗೆ ರೈತ ಸಿಂಗಾರ ಮಾಡಿ ಪ್ರತಿ ಗ್ರಾಮಗಳ ಅಗಸಿಯ ಮುಂದೆ ಕರಿ ಹರಿಯುವುದು ವಾಡಿಕೆಯಲ್ಲಿದೆ.
ಸಾಯಂಕಾಲ ಊರಿನ ಎಲ್ಲ ರೈತರು ಸೇರಿಕೊಂಡು ಕಾರಹುಣ್ಣಿಮೆಯ ಕರಿ ಹರಿಯುವುದು ಒಂದು ಸಂಭ್ರಮದ ಸಡಗರವೇ ತಾಲೂಕಿನ ಸಗರ ಗ್ರಾಮದಲ್ಲಿ ಕಂಡು ಬಂದಿತ್ತು. ರೈತರು ಬೆಳಗ್ಗೆಯಿಂದಲೇ ಎತ್ತುಗಳಿಗೆ ಮೈ ತೊಳೆದು ಕೊಂಬಿಗೆ ಬಣ್ಣ ಹಚ್ಚಿ ಗೊಂಡೆ, ಜೂಲಾ, ಬಣ್ಣ ಬಣ್ಣದ ಮೋಗಡಗಳನ್ನು ಕಟ್ಟಿ ಸಿಂಗಾರ ಮಾಡುತ್ತಾರೆ.
ಇದು ರೈತನ ವಾರ್ಷಿಕ ಮುಂಗಾರು ಹಬ್ಬ ಹಾಗೂ ದೇಸಿ ಸಂಭ್ರಮಗಳಲ್ಲಿ ಪ್ರಾಮುಖ್ಯ ಪಡೆದಿರುವುದು.ಮುಂದೆ ಜೂನ್ ಸಾಥ್ ಆದ ಮೇಲೆ ಮಿರುಗ ಮಿಂಚಿ ಮಳೆಯಾಗುತ್ತದೆ ಎಂಬುದು ರೈತರ ನಂಬಿಕೆ.