ಭಯೋತ್ಪಾದನೆ ಜಾಗತಿಕ ಸಮಸ್ಯೆ: ಕುಲಪತಿ ಡಾ. ನಿರಂಜನ

0
127

ಕಲಬುರಗಿ: ಭಯೋತ್ಪಾದನೆಯ ಎಂಬುವದು ಸಮಸ್ಯೆ ಕೇವಲ ಜಮ್ಮು ಮತ್ತು ಕಾಶ್ಮೀರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ, ಅದು ದೇಶವ್ಯಾಪಿಯ ಪ್ರಮುಖ ಸಮಸ್ಯೆಯಾಗಿ ಕಾಡುತ್ತಿದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ ನಿಷ್ಠಿ ಹೇಳಿದರು.

ಶರಣಬಸವ ವಿಶ್ವವಿದ್ಯಾಲಯದ ಇಸಿಇ ವಿಭಾಗದಲ್ಲಿ ಹಮ್ಮಿಕೊಂಡಿದ್ದ ಆಂಟಿ ಟೆರಿರಿಸಂ ಡೇ(ಭಯೋತ್ಪಾದನಾ ವಿರೋಧಿ ದಿನ) ಕಾರ್ಯಕ್ರಮಲ್ಲಿ ಮಾತನಾಡಿದ ಅವರು, ಪಾಕಿಸ್ತಾನದಿಂದ ಯಾವುದೇ ಒಳ್ಳೆಯ ನೀರಿಕ್ಷೆ ಇಟ್ಟುಕೊಳ್ಳಬಾರದು ಆ ರಾಷ್ಟ್ರವು ಅಲ್ಪ ಸಂಖ್ಯಾತರ ಹೆಸರಲ್ಲಿ ಹೇಯ ಕೃತ್ಯಗಳನ್ನು ನಡೆಸುತ್ತಿದೆ ಆದ್ದರಿಂದ ಯುವ ಜನತೆ ಈ ಕೃತ್ಯದಲ್ಲಿ ಭಾಗಿಯಾಗದಂತೆ ಸಂರಕ್ಷಿಸಬೇಕಾಗಿದೆ ಎಂದರು.

Contact Your\'s Advertisement; 9902492681

ಅತಿಥಿಯಾಗಿ ಆಗಮಿಸಿದ್ದ ಬ್ರಹ್ಮಪೂರ ಠಾಣೆಯ ಸರ್ಕಲ್ ಇನಸ್ಪೆಕ್ಟರ್ ಪ್ರಸಾದ ಗೊಖಲೆ ಮಾತನಾಡಿ,  ಯುವ ಜನತೆ ಹೆಚ್ಚಾಗಿ ಇದರಲ್ಲಿ ಭಾಗಿಯಾಗುತ್ತಿದ್ದಾರೆ. ಭಯೋತ್ಪಾದನೆಯಂತಹ ಚಟುವಟಿಕೆಯ ಸಮಸ್ಯೆಗಳನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿಸುವ ಮೂಲಕ ಅವರಲ್ಲಿ ಜಾಗೃತಿ ಅರಿವು ಮೂಡಿಸಬೇಕಾಗಿದೆ. ಇಂತಹ  ಕೃತ್ಯಗಳಿಂದ ಸಮಾಜದಲ್ಲಿ ಪ್ರಾಣ ಹಾನಿ ಮತ್ತು ಆರ್ಥಿಕ ಹಾನಿ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರಿ ಮಾತನಾಡಿ, ಮಕ್ಕಳಿಗೆ ಮಾನವೀಯ ಮೌಲ್ಯಗಳ ಬಗ್ಗೆ ಅರಿವು ಮೂಡಿಸಬೇಕು. ಉನ್ನತ ಶಿಕ್ಷಣ ಪಡೆದವರೇ ಮಾನಸಿಕವಾಗಿ ಕುಂಠಿತಗೊಳ್ಳುತ್ತಿದ್ದಾರೆ. ಶಿಕ್ಷಣದಲ್ಲಿ ಮಾನಸಿಕ ಸ್ಥೈರ್ಯ ಮತ್ತು ಭಯೋತ್ಪಾದನಾ ಚಟುವಟಿಕೆಗಳಂತ ಹೇಯ ಕೃತ್ಯಗಳ ಕೆಟ್ಟ ಪರಿಣಾಮದ ಬಗ್ಗೆ ತಿಳಿವಳಿಕೆ ನೀಡುವುದು ಅನಿವಾರ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗದಿರುವಂತೆ ಪ್ರತಿಜ್ಞಾ ವಿಧಿ ಭೋಧಿಸಲಾಯಿತು. ವಿವಿಯ ಸಮ ಕುಲಪತಿ ಡಾ. ವಿ.ಡಿ.ಮೈತ್ರಿ, ಡೀನ್ ಡಾ. ಲಕ್ಷ್ಮೀ ಮಾಕಾ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಟಿ.ವಿ.ಶಿವಾನಂದನ್ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here