ಮೆರವಣಿಗೆಗಿಂತ ಬುದ್ಧ ಬಸವ ಅಂಬೇಡ್ಕರರ ಅರಿಯುವುದು ಮುಖ್ಯ: ಕೆ.ನೀಲಾ

0
210

ಸುರಪುರ: ಡಾ:ಬಿ.ಆರ್.ಅಂಬೇಡ್ಕರ ಜಯಂತ್ಯೋತ್ಸವ ಸಮಿತಿಯಿಂದ ನಗರದ ಬಸ್ ನಿಲ್ದಾಣ ಬಳಿಯ ಅಂಬೇಡ್ಕರರ ವೃತ್ತದಲ್ಲಿ ಬುದ್ಧ ಬಸವ ಅಂಬೇಡ್ಕರರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಸೋಮವಾರ ಸಂಜೆ ನಡೆದ ಕಾರ್ಯಕ್ರಮವನ್ನು ಮಹಾರಾಷ್ಟ್ರದ ಉಸ್ತುರಿಯ ಕೊರಣೇಶ್ವರ ಸ್ವಾಮೀಜಿ ಹಾಗು ಬೀದರಿನ ಅಣದೂರಿನ ವರಜ್ಯೋತಿ ಭಂತೇಜಿಯವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕೊರಣೇಶ್ವರ ಸ್ವಾಮೀಜಿ ಮಾತನಾಡಿ,ವೈದಿಕಶಾಹಿಗಳು ತಮ್ಮ ಅಟ್ಟಹಾಸ ಮೆರೆಯುವ ಸಂದರ್ಭದಲ್ಲಿ ಉದಯಿಸಿದ ಬುದ್ಧ ತನ್ನ ಪಂಚಶೀಲ ಸಂದೇಶಗಳ ಮೂಲಕ ಜಗತ್ತಿಗೆ ಶಾಂತಿ ಭೋದಿಸಿದರು.ಅದರಂತೆ ೧೨ನೇ ಶತಮಾನದಲ್ಲಿ ಬಂದ ಬಸವಣ್ಣ ಶೂದ್ರರನ್ನು ಸಮಾನವಾಗಿ ಕಂಡು ಏಣಿ ಶ್ರೇಣಿಗಳ ತೊಲಗಿಸಲು ಲಿಂಗಾಯತ ಧರ್ಮವನ್ನು ಸ್ಥಾಪಿಸುವ ಮೂಲಕ ವಚನಗಳ ಮೂಲಕ ಅರಿವು ಮೂಡಿಸಿದರು.ಈ ಇಬ್ಬರು ಮಹನಿಯರ ಆಶಯಗಳನ್ನ ಅರಿತುಕೊಂಡ ಡಾ:ಬಾಬಾ ಸಾಹೇಬ ಅಂಬೇಡ್ಕರರು ಜಗತ್ತೆ ಮೆಚ್ಚುವ ಸಂವೀಧಾನ ರಚಿಸುವ ಮೂಲಕ ದೇಶದ ಎಲ್ಲ ಜಾತಿ,ಮತ,ಧರ್ಮದ ಜನರ ಅಭೀವೃಧ್ಧಿಯನ್ನು ಗಮನದಲ್ಲಿಟ್ಟುಕೊಂಡು ಇಂದು ನಮಗೆಲ್ಲ ಒಂದು ಧ್ವನಿಯಾಗಿದ್ದಾರೆ.ಆದರೆ ನಾವೆಲ್ಲರು ಈ ಮಹನಿಯರುಗಳನ್ನು ಅರಿಯುವ ಮೂಲಕ ಜಾತಿಗಳನ್ನ ತೊಲಗಿಸೋಣ ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ್ದ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಕೆ.ನೀಲಾ ಮಾತನಾಡಿ,ಬುದ್ಧ ಬಸವ ಅಂಬೇಡ್ಕರರು ಈ ದೇಶ ಕಂಡ ಅನರ್ಘ್ಯ ರತ್ನವಾಗಿದ್ದಾರೆ.ನಾವು ಕೇವಲ ಅವರ ಭಾವಚಿತ್ರಗಳನ್ನ ಮಾತ್ರ ಮೆರೆಸಿದರೆ ಅವರಿಗೆ ಅವಮಾನಿಸಿದಂತಾಗಲಿದೆ,ಮೆರವಣಿಗೆಗಿಂತ ಬುದ್ಧ ಬಸವ ಅಂಬೇಡ್ಕರರ ಆಶಯಗಳನ್ನು ಅರಿಯುವುದು ಮುಖ್ಯವಾಗಿದೆ ಎಂದರು.ಪ್ರತಿಯೊಬ್ಬರು ಮೊದಲು ಶಿಕ್ಷಿತರಾಗಬೇಕು,ಅಂದಾಗ ನಾವೆಲ್ಲರು ಬಾಬಾ ಸಾಹೇಬರ ಕೊಡುಗೆಯನ್ನು ಬಳಸಿಕೊಂಡು ಸಮಾಜದಲ್ಲಿ ಮೇಲೆ ಬರಲು ಸಾಧ್ಯವಾಗಲಿದೆ ಎಂದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಾವಿರಾರು ಜನ ಬುದ್ಧ ಬಸವ ಅಂಬೇಡ್ಕರರ ಅಭಿಮಾನಿಗಳಿಂದ ನಗರದ ಟಿಪ್ಪು ಸುಲ್ತಾನ ವೃತ್ತದಿಂದ ನಗರದಾದ್ಯಂತ ಬುಧ್ಧ ಬಸವ ಅಂಬೇಡ್ಕರರ ಮೂರ್ತಿಗಳ ಬೃಹತ್ ಮೆರವಣಿಗೆ ನಡೆಯಿತು.ನಂತರ ನಡೆದ ಬಹಿರಂಗ ಸಮಾವೇಶದ ಆರಂಭದಲ್ಲಿ ನಗರಸಭೆ ಸದಸ್ಯ ಶಿವಕುಮಾರ ಕಟ್ಟಿಮನಿ ಅಂಬೇಡ್ಕರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ,ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ನಂತರ ವರಜ್ಯೋತಿ ಭಂತೇಜಿಯವರಿಂದ ಬುಧ್ಧನ ಪಂಚಶೀಲ ಪಠಣ ನಡೆಯಿತು.ಇದೇ ಸಂದರ್ಭದಲ್ಲಿ ಬುಧ್ಧ ಘೋಷ ದೇವಿಂದ್ರ ಹೆಗ್ಗಡೆ,ಕಲಬುರ್ಗಿ ಕಾರಾಗೃಹದ ಅಧೀಕ್ಷಕ ಕೃಷ್ಣಕುಮಾರ್ ಹಾಗು ಅಧ್ಯಕ್ಷತೆ ವಹಿಸಿದ್ದ ವೆಂಕಟೇಶ ಹೊಸಮನಿ ಮಾತನಾಡಿದರು.ಇದೇ ಸಂದರ್ಭದಲ್ಲಿ ನಿರ್ಮಲಾ ಸಂಗಡಿಗರ ಭೂಮತಾಯಿ ಕಲಾ ಬಳಗದಿಂದ ಕ್ರಾಂತಿ ಗೀತೆಗಳು ಗಾಯನ ನಡೆಯಿತು.

ಉರ್ದು ಸಾಹಿತಿ ಎಂ.ಡಿ.ರಫೀಕ್,ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ,ದೇವಿಂದ್ರಪ್ಪ ಪತ್ತಾರ,ನಿಂಗಣ್ಣ ಗೋನಾಲ,ಆದಪ್ಪ ಸುರಪುರಕರ್,ಧರ್ಮಣ್ಣ ಹುಲಿ,ಭೀಮರಾಯ ಸಿಂಧಗೇರಿ,ಮಾಳಪ್ಪ ಕಿರದಹಳ್ಳಿ,ವೆಂಕಟೇಶ ಸುರಪುರ,ಅಶೋಕ ಸುರಪುರಕರ್,ಅಶ್ವಿನಿ ಮದನಕರ್,ಸಂಗೀತಾ ಮೇಡಂ,ಚೆನ್ನಪ್ಪ ಆನೆಗುಂದಿ,ಮಲ್ಲಿಕಾರ್ಜುನ ಸತ್ಯಂಪೇಟೆ,ಶಿವಣ್ಣ ಇಜೇರಿ,ಮಾನಪ್ಪ ಕಂಕರ್ ಮಶಿನ್,ಶಿವಲಿಂಗಪ್ಪ ದೊಡಮನಿ ರಾಜನಕೊಳೂರ,ಮಡಿವಾಳಪ್ಪ ಕಿರದಹಳ್ಳಿ,ಮಲ್ಲಣ್ಣ ಕಟ್ಟಿಮನಿ,ಹಣಮಂತ ಚಂದಲಾಪೂರ,ಮಲ್ಲಪ್ಪ ತಳವಾರಗೇರಾ ವೇದಿಕೆ ಮೇಲಿದ್ದರು.ರಾಹುಲ್ ಹುಲಿಮನಿ ಸ್ವಾಗತಿಸಿದರು,ಆದಪ್ಪ ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು,ರಾಜು ಕುಂಬಾರ,ಮಲ್ಲು ಕೆಸಿಪಿ ನಿರೂಪಿಸಿದರು,ನಾಗಣ್ಣ ಕಲ್ಲದೇವನಹಳ್ಳಿ ವಂದಿಸಿದರು.

ಆಕಾಶ ಕಟ್ಟಿಮನಿ,ರಮೇಶ್ ಅರಕೇರಿ,ವಿಶ್ವನಾಥ ಹೊಸಮನಿ,ಧರ್ಮಣ್ಣ ಬಡಿಗೇರ,ರಮೇಶ ಬಡಿಗೇರ,ಮಲ್ಲು ಮುಷ್ಠಳ್ಳಿ,ಗೌತಮ್ ಬಡಿಗೇರ,ಶರಣು ಹಸನಾಪುರ,ರಾಮಚಂದ್ರ ವಾಗಣಗೇರಾ,ಮೂರ್ತಿ ಬೊಮ್ಮನಹಳ್ಳಿ,ಮಲ್ಲಿಕಾರ್ಜುನ ತಳ್ಳಳ್ಳಿ,ವೀರಭದ್ರ ತಳವಾರಗೇರಾ,ಚನ್ನಪ್ಪ ದೇವಾಪುರ,ರಾಮಣ್ಣ ಶೆಳ್ಳಿಗಿ,ಗಿರೀಶ ಡ್ಯಾನಿ,ಯಲ್ಲಪ್ಪ ಚಿನ್ನಾಕಾರ,ಆನಂದ ಅರಕೇರಿ ಸೇರಿದಂತೆ ಸಹಸ್ರಾರು ಜನರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here