ಸುರಪುರ: ಕಳೆದ ಎರಡುವರೆ ತಿಂಗಳುಗಳಿಂದ ಬಾಗಿಲು ಮುಚ್ಚಿಕೊಂಡಿದ್ದ ಹೋಟೆಲ್ ಮತ್ತು ದಾಬಾ ರಸ್ಟೋರೆಂಟ್‌ಗಳು ಸೋಮವಾರ ಲಾಕ್‌ಡೌನ್ ಸಡಿಲಿಕೆಯಿಂದಾಗಿ ಮತ್ತೆ ಮೊದಲಿನಂತೆ ಕಾರ್ಯಾರಂಭಗೊಂಡಿವೆ.ಆದರೆ ಕೊರೊನಾ ಭಯದಿಂದ ಗ್ರಾಹಕರು ಬರದೆ ಅನೇಕ ಹೋಟೆಲ್‌ಗಳು ಗ್ರಾಹಕರಿಲ್ಲದೆ ಖಾಲಿ ಹೊಡೆಯುತ್ತಿವೆ.
ನಗರದ ಹೊರಭಾಗದಲ್ಲಿರುವ ಬೀದರ ಬೆಂಗಳೂರು ಹೆದ್ದಾರಿಯಲ್ಲಿರುವ ಸಾಯಿ ದಾಬಾ ಸದಾಕಾಲ ಗ್ರಾಹಕರಿಂದ ತುಂಬಿರುತ್ತಿತ್ತು,ಆದರೆ ಲಾಕ್‌ಡೌನ್ ಎಫೆಕ್ಟ್‌ನಿಂದಾಗಿ ದಾಬಾ ಆರಂಭಗೊಂಡಿದ್ದರು ಗ್ರಾಕರು ಮಾತ್ರ ತುಂಬಾ ಕಡಿಮೆಯಾಗಿದ್ದಾರೆ ಎನ್ನುತ್ತಾರೆ ದಾಬಾದ ಮಾಲೀಕ ಭೀಮಾಶಂಕರ ಲಕ್ಷ್ಮೀಪುರ.
ಹೋಟೆಲ್ ನಡೆಸುವ ನಾವು ಗ್ರಾಹಕರ ಕಾಳಜಿ ಮುಖ್ಯವಾಗಿಸಿಕೊಂಡು ಮರು ಬಳಕೆಯಾಗದ ವಸ್ತುಗಳನ್ನೆ ಬಳಸಬೇಕು.ಇದರಿಂದ ಗ್ರಾಹಕರಿಗು ಮತ್ತು ನಮಗೂ ಒಳ್ಳೆಯದು.ಅಲ್ಲದೆ ಗ್ರಾಹಕರು ಒಳ್ಳೆಯ ಭರವಸೆಯೊಂದಿಗೆ ಹೋಟೆಲ್‌ಗಳಿಗೆ ಬರುತ್ತಾರೆ.- ಭೀಮಾಶಂಕರ ಲಕ್ಷ್ಮೀಪುರ ದಾಬಾ ಮಾಲೀಕ
ಈ ಕುರಿತು ಅವರು ಮಾತನಾಡಿ,ಈಗ ದೇಶದಲ್ಲಿಯೆ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದರಿಂದ ಕಳೆದ ಎರಡು ವರೆ ತಿಂಗಳಿನಿಂದ ದಾಬಾ ಬಂದ್ ಮಾಡಲಾಗಿತ್ತು,ನಿನ್ನೆಯಿಂದ ಸರಕಾರ ಲಾಕ್‌ಡೌನ್ ಸಡಿಲಿಕೆಯಿಂದಾಗಿ ಆರಂಭಿಸಿದ್ದೇವೆ,ಆದರೆ ಗ್ರಾಹಕರು ಮೊದಲಿನಂತಿಲ್ಲ ತುಂಬಾ ಕಡಿಮೆಯಾಗಿದ್ದಾರೆ.ಇನ್ನೂ ಜನರು ಮನೆಯಿಂದ ಹೊರ ಬರಲು ಭೀತಿಯಿದೆ.ನಾವು ಕೂಡ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತೆಗಾಗಿ ನಮ್ಮ ದಾಬಾದಲ್ಲಿ ಬರುವ ಗ್ರಾಹಕರ ಹಿತದೃಷ್ಟಿಯಿಂದಾಗಿ ಮತ್ತು ನಮ್ಮ ಹಿತದೃಷ್ಟಿಯಿಂದಾಗಿ ಇಲ್ಲಿ ಬಳಸುವ ಯಾವುದೆ ವಸ್ತುಗಳು ಮರು ಬಳಕೆಯಾಗುವುದಿಲ್ಲ.ತಟ್ಟೆ,ಗ್ಲಾಸು,ಪಲ್ಯ ಹಾಕುವ ಸಣ್ಣ ತಟ್ಟೆ,ರೊಟ್ಟಿ ಚಪಾತಿ ಹಾಕುವ ತಟ್ಟೆಗಳು ಯಾವುವಾದರು ಗ್ರಾಹಕರಿಗೆ ನೀಡುವ ಪ್ರತಿಯೊಂದು ವಸ್ತು ಒಂದುಬಾರಿ ಬಳಿಕೆಯಾದರೆ ಅದನ್ನು ನೇರವಾಗಿ ತೊಟ್ಟಿಗೆ ಹಾಕುತ್ತೇವೆ.
ಕಾರಣ ಸ್ಟೀಲ್ ವಸ್ತುಗಳು ಬಳಸುವುದರಿಂದ ವೈರಸ್ ಅದರ ಮೇಲು ಎಷ್ಟೋ ಗಂಟೆಗಳ ಕಾಲ ಬದುಕಬಲ್ಲದೆಂದು ಆರೋಗ್ಯ ಇಲಾಖೆ ತಿಳಿಸುತ್ತದೆ.ಆದ್ದರಿಂದ ನಮ್ಮಲ್ಲಿಗೆ ಬರುವ ಗ್ರಾಹಕರ ಹಿತ ಮುಖ್ಯ ಅದಕ್ಕಾಗಿ ಎಲ್ಲವೂ ಒಂದೇ ಬಾರಿ ಬಳಸಿ ಎಸೆಯುವ ವಸ್ತುಗಳನ್ನೆ ಬಳಸಲಾಗುತ್ತದೆ.ಮತ್ತು ನಮ್ಮ ಸಪ್ಲಾಯರ್ಸ್‌ಗು ಕೂಡ ಹ್ಯಾಂಡ್ ಗ್ಲೋಸ್ ಹಾಕಿಯೆ ಸಪ್ಲಾಯ್ ಮಾಡಿಸಲಾಗುತ್ತಿದೆ.ಇದರಿಂದ ಗ್ರಾಹಕರು ಯಾವುದೇ ಅಳುಕಿಲ್ಲದೆ ಹೋಟೆಲ್‌ಗೆ ಬರಬಹುದಾಗಿದೆ ಎಂದು ತಿಳಿಸುತ್ತಾರೆ.