ಕಲಬುರಗಿ: ಕಿಲ್ಲರ್ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಮತ್ತೊಂದು 17 ವರ್ಷದ ಯುವತಿ ಮೃತಪಟ್ಟಿದ್ದಾರೆ. ಮೃತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಅದೇ ರೀತಿ ಮೃತ ಯುವತಿ ಸೇರಿ 10 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 769 ದಾಖಲಾಗಿದೆ.
ಕೊರೊನಾ ಮಹಾಮಾರಿ ಕೊರೊನಾ ಪ್ರಕರಣಗಳು ಜಿಲ್ಲೆಯಲ್ಲಿ ಏರಿಕೆ ಕಾಣುತ್ತಿರು ಬೆನ್ನಲ್ಲೆ ಜಿಲ್ಲೆಯ ಜನರು ಕೊರೊನಾ ಜೊತೆಗೆ ಬದುಕು ಯತ್ನ ನಡೆಸಿದ್ದಾರೆ.
ಈ ಹಿನ್ನೆಯಲ್ಲಿ ಜಿಲ್ಲೆಯಲ್ಲಿ ಬಹುತೇಕ ಲಾಕ್ ಡೌನ್ ಸಡಲಿಕೆಯಾಗಿದ್ದು, ಜನರು ಪ್ರತಿ ದಿನದಂತೆ ಜೀವನ ನಡೆಸಲು ಮುಂದಾಗಿದ್ದಾರೆ. ಆದರೆ ಇದರೊಂದಿಗೆ ಕೋವಿಡ್-19 ಸೋಂಕು ವಿರುದ್ಧ ಜಾಗೃತೆ ವಹಿಸಿ ಎಚ್ಚರಿಕೆ ವಹಿಸುವ ಅಗತ್ಯವಿದೆ. ಅಲ್ಲದೇ ಮುಂಜಾಗೃತೆ ಕ್ರಮ ಕೈಗೊಳಬೇಕಾಗಿದೆ.