ಶಹಾಪುರ: ಕೃಷಿ ಕೂಲಿ ಕಾರ್ಮಿಕರಿಗೆ ಕನಿಷ್ಠ ಮೂರು ತಿಂಗಳ ವೇತನ ನೀಡುವಂತೆ ಹೊಸ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜಾಪುರ ಗ್ರಾಮದಲ್ಲಿ ಇಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ಪ್ರತಿಭಟನೆ ಮಾಡಲಾಯಿತು.
ಕರೋನಾ ವೈರಸ್ ಇರುವುದರಿಂದ ಇಡೀ ದೇಶವೇ ಲಾಕ್ ಡೌನ್ ಆಗಿರುವ ಸಂದರ್ಭದಲ್ಲಿ ಕೃಷಿ ಕೂಲಿ ಕಾರ್ಮಿಕರ ಬದುಕು ಅತಂತ್ರ ಸ್ಥಿತಿಯಲ್ಲಿರುವುದರಿಂದ ಸರ್ಕಾರ ಧನಸಹಾಯ ನೀಡಬೇಕು ಹಾಗೂ ದಿನವೊಂದಕ್ಕೆ 500 ನೂರು ರೂಪಾಯಿಗಳಂತೆ ವರ್ಷದಲ್ಲಿ ಕನಿಷ್ಠ 200 ದಿನಗಳವರೆಗೆ ಉದ್ಯೋಗ ನೀಡಬೇಕು.
ಅಲ್ಲದೆ ಆರು ತಿಂಗಳಿಗೆ ತಲಾ ಐವತ್ತು ಕೆಜಿ ಅಕ್ಕಿ, ಗೋಧಿ, ನೀಡುವುದರ ಜೊತೆಗೆ ವಲಸೆ ಬಂದ ಕಾರ್ಮಿಕರಿಗೆ ಯಾವುದೇ ಆಧಾರ್ ಕಾರ್ಡ್ ಇನ್ನಿತರ ದಾಖಲೆಗಳು ಇಲ್ಲದಿದ್ದರೂ ಮಾನವೀಯತೆ ದೃಷ್ಟಿಯಿಂದ ಅವರಿಗೆ ಕೆಲಸ ನೀಡಬೇಕು ಎಂದು ಈ ಸಂದರ್ಭದಲ್ಲಿ ಸರಕಾರಕ್ಕೆ ಒತ್ತಾಯಿಸಲಾಯಿತು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜಾಪುರ ಗ್ರಾಮ ಘಟಕದ ಅಧ್ಯಕ್ಷರಾದ ರಾಜೇಸಾಬ್,ಕಾರ್ಯದರ್ಶಿ ಖಂಡಪ್ಪ ಶಖಾಪುರ,ಶ್ರೀಶೈಲ ಹಾಗೂ ಭೀಮರಾಯ ಇನ್ನಿತರರು ಹಾಜರಿದ್ದರು.