ಕಲಬುರಗಿ: ನಗರದ ಸೂಪರ್ ರಸ್ತೆಯಲ್ಲಿ ಇರುವ ಅಂಚೆ ಕಚೇರಿಗಳ ವರಿಷ್ಠ ಅಧೀಕ್ಷರ ಕಾರ್ಯಾಲಯ ಕಚೇರಿ ಮುಂದೆ ಕೊರಮ , ಕೊರವ, ಕೊರಚ ಸಮುದಾಯದವರನ್ನು ಎಸ್.ಸಿ ಪಟ್ಟಿಯಲ್ಲಿ ಯಥಾವತ್ತಾಗಿ ಮುಂದುವರಿಸುಂತೆ ಕರ್ನಾಟಕ ಸರ್ಕಾರವು ರಾಷ್ಟ್ರೀಯ ಎಸ್.ಸಿ ಅಯೋಗಕ್ಕೆ ಶಿಪಾರಸು ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ರಾಜ್ಯಾದ್ಯಂತ ಪತ್ರ ಚಳುವಳಿ ಕರೆ ನೀಡಿದರೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಕೊರಮ, ಕೊರವ ಕೊರಚ ಸಮುದಾಯದವರು ಜಿಲ್ಲೆಯಾದ್ಯಂತ ಪತ್ರ ಬರೆದು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇಡೀ ದೇಶದಲ್ಲಿ ಕೊರಮ,ಕೊರವ ಕೊರಚ, ಸಮುದಾಯಗಳು ಕರ್ನಾಟಕ ರಾಜ್ಯ ಸೇರಿದಂತೆ ೧೬ ರಾಜ್ಯಗಳಲ್ಲಿ ಎಸ್.ಸಿ ಪಟ್ಟಿಯಲ್ಲಿ ಹಾಗೂ ೧೪ ರಾಜ್ಯಗಳಲ್ಲಿ ಎಸ್.ಟಿ ಪಟ್ಟಿಯಲ್ಲಿದ್ದು ಆದರೆ ಕೆಲವರು ಅನಾವಶ್ಯಕವಾಗಿ ನಮ್ಮ ಸಂವಿಧಾನಿಕ ಅಧಿಕಾರವನ್ನು ಕಸಿದುಕೊಳ್ಳಲು ಪ್ರಯತ್ನ ಮಾಡುತ್ತೆವೆ ಇದನ್ನು ಸರ್ಕಾರ ಮನಗಂಡು ರಾಷ್ಟ್ರೀಯ ಎಸ್.ಸಿ ಆಯೋಗಕ್ಕೆ ಯಥಾವತ್ತಾಗಿ ಮೀಸಲಾತಿ ವರದಿ ಶಿಪಾರಸು ಮಾಡಬೇಕಾಗಿ ಪತ್ರ ಚಳುವಳಿ ಮೂಲಕ ಸರ್ಕಾರಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ವೆಂಕಟೇಶ್ ಎಸ್. ಭಜಂತ್ರಿ, ಸಾಯಿಬಣ್ಣ ಭಜಂತ್ರಿ, ಮಲ್ಲಿಕಾರ್ಜುನ ಭಜಂತ್ರಿ, ಸುಭಾಷ್ ಚಂದ್ರ ಭಜಂತ್ರಿ, ಕಲ್ಯಾಣಿ ಭಜಂತ್ರಿ, ಜಗದೇಶ ಜಾಧವ, ಜಗನ್ನಾಥ ಭಜಂತ್ರಿ, ಮಲ್ಲೇಶಿ ಭಜಂತ್ರಿ ಇತರರು ಭಾಗವಹಿಸಿದರು.