ಕಲಬುರಗಿ: ಜಿಲ್ಲೆಯಲ್ಲಿ ಬುಧವಾರ ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ 10 ಜನ ಮತ್ತು ದೆಹಲಿ ಪ್ರವಾಸ ಹಿನ್ನೆಲೆಯ ಓರ್ವ ಯುವತಿ ಸೇರಿದಂತೆ ಒಟ್ಟು 11 ಜನರಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ ಎಂದು ಡಿ.ಸಿ.ಶರತ್ ಬಿ. ತಿಳಿಸಿದ್ದಾರೆ.
ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ ಕಾಳಗಿ ಪಟ್ಟಣದ 5 ವರ್ಷದ ಹೆಣ್ಣು ಮಗು (ಪಿ-5958) ಮತ್ತು 13 ವರ್ಷದ ಬಾಲಕಿ (ಪಿ-5961), ಕಲಬುರಗಿಯ ಬಾಪುನಗರ ಪ್ರದೇಶದ 35 ವರ್ಷದ ಯುವಕ (ಪಿ-5959), ಆಶ್ರಯ ಕಾಲೋನಿ ಸುಲ್ತಾನಪುರ ರಸ್ತೆ ಪ್ರದೇಶದ 15 ವರ್ಷದ ಬಾಲಕಿ (ಪಿ-5987)ಮತ್ತು 23 ವರ್ಷದ ಯುವತಿ (ಪಿ-5988), ಚಿಂಚೋಳಿ ತಾಲೂಕಿನ ಲಚ್ಚುನಾಯಕ ತಾಂಡಾದ 7 ವರ್ಷದ ಬಾಲಕ (5960) ಮತ್ತು 35 ವರ್ಷದ ಯುವಕ (ಪಿ-5962), ಯಡ್ರಾಮಿಯ 13 ವರ್ಷದ ಬಾಲಕ (ಪಿ-5964), ಕಲಬುರಗಿ ತಾಲೂಕಿನ ಬಬಲಾದ ಗ್ರಾಮದ 7 ವರ್ಷದ ಬಾಲಕ (ಪಿ-5985), ಅಫಜಲಪುರ ತಾಲೂಕಿನ ಮದರಾ (ಬಿ) ಗ್ರಾಮದ 25 ವರ್ಷದ ಯುವತಿಗೆ (ಪಿ-5986) ಕೊರೋನಾ ಸೋಂಕು ತಗುಲಿದೆ.
ಇದಲ್ಲದೇ ನವದೆಹಲಿ ಪ್ರವಾಸ ಹಿನ್ನೆಲೆಯ ಕಲಬುರಗಿಯ ಗಣೇಶ ನಗರದ ಬಳಿಯ ಬಾರೆಹಿಲ್ಸ್ ಪ್ರದೇಶದ 24 ವರ್ಷದ ಯುವತಿ (ಪಿ-5963) ಕೋವಿಡ್-19 ಸೋಂಕು ಅಂಟಿಕೊಂಡಿದೆ.
ಇದರಿಂದ ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ 780ಕ್ಕೆ ಏರಿದೆ. ಇದರಲ್ಲಿ ಇದೂವರೆಗೆ 279 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 08 ಜನ ನಿಧನ ಹೊಂದಿರುತ್ತಾರೆ. ಉಳಿದಂತೆ 493 ಸಕ್ರೀಯ ರೋಗಿಗಳಿದ್ದಾರೆ ಎಂದು ಶರತ್ ಬಿ. ವಿವರಿಸಿದರು.