ಕಲಬುರಗಿ: ಕೊರೋನಾ ಪೀಡಿತ ಐದು ಮಕ್ಕಳು ಸೇರಿದಂತೆ ಕಲಬುರಗಿ ಜಿಲ್ಲೆಯ ಒಟ್ಟು 06 ಜನರು ಕೋವಿಡ್-19 ಸೋಂಕಿನಿಂದ ಗುಣಮುಖರಾಗಿ ಗುರುವಾರ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.
ಕಾಳಗಿ ತಾಲೂಕಿನ ಅರುಣಕಲ್ ತಾಂಡಾದ 07 ವರ್ಷದ ಬಾಲಕ (ಪಿ-1136), ಅಫಜಲಪುರ ತಾಲೂಕಿನ ರೇವೂರ ಗ್ರಾಮದ 25 ವರ್ಷದ ಯುವಕ (ಪಿ-3395), ಕಮಲಾಪುರ ತಾಲೂಕಿನ 09 ವರ್ಷದ ಬಾಲಕ (ಪಿ-3730), ವಿಕೆ ಸಲಗರ್ ಗ್ರಾಮದ 07 ವರ್ಷದ ಬಾಲಕ (ಪಿ-3376), 08 ವರ್ಷದ ಬಾಲಕಿ (ಪಿ-3377) ಹಾಗೂ 12 ವರ್ಷದ ಬಾಲಕಿ (ಪಿ-3378) ಮಹಾಮಾರಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇದರಿಂದ ಜಿಲ್ಲೆಯಲ್ಲಿ ಕೊರೋನಾ ಪೀಡಿತ 796 ಜನರಲ್ಲಿ 285 ಜನ ಗುಣಮುಖರಾಗಿದ್ದಾರೆ. ಉಳಿದಂತೆ 503 ಸಕ್ರಿಯ ರೋಗಿಗಳಿದ್ದಾರೆ ಎಂದು ಡಿ.ಸಿ. ಶರತ್ ಬಿ. ವಿವರಿಸಿದರು.