ಪ್ರೀತಿಗಾಗಿ ಪ್ರಾಣ ಸ್ನೇಹಿತನನ್ನೆ ಕೊಲೆ ಮಾಡಿದ ದ್ರೋಹಿ

0
157

ಕಲಬುರಗಿ: ಪ್ರೀತಿಗಾಗಿ ತನ್ನ ಆತ್ಮೀಯ ಸ್ನೇಹಿತನನ್ನೇ ಕಲ್ಲು ಹಾಕಿ ಬರ್ಬರವಾಗಿ ಕೊಂದ ಪೈಶಾಚಿಕ ಕೃತ್ಯ ಮೆರೆದಿರುವ ಘಟನೆ ಇಲ್ಲಿನ ಅಫಜಲಪುರ್ ತಾಲೂಕು ಆತನೂರು ಗ್ರಾಮದಲ್ಲಿ ನಡೆದಿದೆ.

ಶಿವಕುಮಾರ ಸಾಳುಂಕೆ (24) ಹತ್ಯೆಯಾದ ಯುವಕ. ತಾನು ಪ್ರೀತಿಸಿದಾಕೆಯನ್ನು ಮದುವೆಯಾಗುತ್ತಿದ್ದಾನೆಂದು ಆರೋಪಿಯಾದ ಮಲ್ಲು ಪೂಜಾರಿ ಆತ್ಮೀಯ ಸ್ನೇಹಿತ ಶಿವಕುಮಾರ ಸಾಳುಂಕೆಗೆ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

Contact Your\'s Advertisement; 9902492681

ದೇವಲ ಗಾಣಗಾಪೂರದಲ್ಲಿ ಗ್ಯಾರೇಜ್ ಕೆಲಸ ಮಾಡುತ್ತಿದ್ದ ಮಲ್ಲು ಪೂಜಾರಿ ಹಾಗೂ ಇಲ್ಲಿಯೆ ವೇಲ್ಡಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಶಿವಕುಮಾರ ಇಬ್ಬರೂ ಸುಮಾರು ವರ್ಷಗಳಿಂದ ಆತ್ಮೀಯ ಸ್ನೇಹಿತರಾಗಿದ್ದರು. ಇತ್ತಿಚಿಗೆ ಇಬ್ಬರ ನಡುವೆ ಹುಡುಗಿಯ ವಿಷಯದಲ್ಲಿ ಗಲಾಟೆ ನಡೆದಿತ್ತು. ಎರಡು ತಿಂಗಳ ಹಿಂದೆಯಷ್ಟೇ ತನ್ನ ಸೋದರ ಮಾವನ ಮಗಳ ಜೊತೆ ಶಿವಕುಮಾರನ ನಿಶ್ಚಿತಾರ್ಥವಾಗಿತ್ತು. ಜೂನ್ 15ರಂದು ಮದುವೆ ಕೂಡ ಫಿಕ್ಸ್ ಆಗಿತ್ತು.

ಅದೇ ಹುಡುಗಿಯನ್ನು ಆರೋಪಿ ಮಲ್ಲು ಪೂಜಾರಿ ಕೂಡ ಪ್ರೀತಿ ಮಾಡುತ್ತಿದ್ದ. ಇದೇ ಕಾರಣಕ್ಕೆ ಇಬ್ಬರ ನಡುವೆ ಗಲಾಟೆಯಾಗಿದೆ. ಮದುವೆ ಕ್ಯಾನ್ಸಲ್ ಮಾಡಿಕೋ ಎಂದು ಶಿವಕುಮಾರನ ಮೇಲೆ ಮಲ್ಲು ಒತ್ತಡ ಹಾಕಿದ್ದಾನೆ. ಆದರೆ ಇದಕ್ಕೆ ಒಪ್ಪದ ಶಿವಕುಮಾರ ಕೊಲೆ ಮಾಡುವ ಪ್ಲಾನ್ ಹಾಕಿಕೊಂಡು ಜೂನ್ 7ರಂದು ತನ್ನ ಬೈಕ್ ಮೇಲೆ ಕರೆದುಕೊಂಡು ಹೋಗಿದ್ದ ಎನ್ನಲಾಗಿದ್ದು, ೀ ಕುರಿತು ರೇವೂರ್ ಠಾಣೆಯ ಪೊಲೀಸರು ತನಿಖೆ ನಡೆಸಿ, ಅನುಮಾನದ ಮೇಲೆ ಮಲ್ಲು ಪೂಜಾರಿಯನ್ನು ತನಿಖೆಗೆ ಒಳಪಡಿಸಿದ್ದಾರೆ. ಆಗ ಮಲ್ಲು ಪೂಜಾರಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆಂದು ಎಸ್ಪಿ ಯಡಾ ಮಾರ್ಟಿನ್ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ನೋಟಕ್ಕೆ ಹುಡುಗಿಯ ಪಾತ್ರ ಏನು ಎಂಬುದು ಕಂಡುಬಂದಿಲ್ಲ, ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಯಡಾ ಮಾರ್ಟಿನ್ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here