ಕಲಬುರಗಿ: ನಗರದ ಹೃದಯ ಭಾಗವಾದ ಐವಾನ್ ಶಾಹಿ ಅತಿಥಿ ಗೃಹದ ಹತ್ತಿರ ಬಿಜೆಪಿ ಕಾರ್ಯಕರ್ತ ಓರ್ವನ ಮೇಲೆ ಹಲ್ಲೆ ನಡೆಸಿರುವ ಘಟನೆ ಇಂದು ನಡೆದಿದೆ.
ಬಾಬು ಜಗಜೀವನ ರಾಮ್ ಬಡಾವಣೆಯ ನಿವಾಸಿಯಾದ ಬಸವರಾಜ ಆನಂದ ಆವಂಟಿ(30) ಹೊಲ್ಲೆಗೆ ಒಳಗಾದ ವ್ಯಕ್ತಿ. ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡುವ ಇವರು, ಬಿಜೆಪಿ ಕಾರ್ಯಕರ್ತರಾಗಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಸಾಯಂಕಾಲ ಕೆಲವು ಕೀಡಿಗೇಡಿಗಳು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ತೀವ್ರ ರಕ್ತ ಶ್ರಾವವಾದ ಪರಿಣಾಮ, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹಲ್ಲೆಗೆ ಕಾರಣ ಮತ್ತು ಹಲ್ಲೆ ನಡೆಸಿರುವ ಬಗ್ಗೆ ಸ್ಟೇಶನ್ ಬಜಾರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.