ಶಹಾಬಾದ: ಕೊರೊನಾದಿಂದ ಉಂಟಾಗುತ್ತಿರುವ ಪರಿಸ್ಥಿತಿಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸೇರಿದಂತೆ ಯಾವುದೇ ಪರೀಕ್ಷೆಗಳನ್ನು ನಡೆಸಬಾರದು. ಕೂಡಲೇ ಪರೀಕ್ಷೆಗಳನ್ನು ರದ್ದುಪಡಿಸಬೇಕೆಂದು ರಾಜ್ಯ ಸರ್ಕಾರವನ್ನು ನಗರಸಭೆಯ ಸದಸ್ಯ ಡಾ. ಅಹ್ಮದ್ ಪಟೇಲ್ ಆಗ್ರಹಿಸಿದ್ದಾರೆ.
ರಾಜ್ಯದ ವಿವಿಧ ಶಿಕ್ಷಣ ತಜ್ಞರು, ಸಾಮಾಜಿಕ ಹೋರಾಟಗಾರರು, ವೈದ್ಯಕೀಯ ತಜ್ಞರು ಹಾಗೂ ಮಕ್ಕಳ ಪಾಲಕರು ಪರೀಕ್ಷೆ ನಡೆಸುವುದು ಸೂಕ್ತವಲ್ಲ ಎಂದು ತಿಳಿಸಿದರೂ ಶಿಕ್ಷಣ ಸಚಿವರು ಪರೀಕ್ಷೆ ನಡೆಸಲು ಮುಂದಾಗಿರುವುದು ದುರದುಷ್ಟಕರ. ಇಡೀ ಪ್ರಪಂಚವೇ ಈ ಕೋವಿಡ್ 19ರ ಕರಾಳಕ್ಕೆ ನಲುಗಿ ಹೋಗಿದೆ.ಈಗಾಗಲೇ ತಮಿಳುನಾಡು, ತೆಲಂಗಾಣ ರಾಜ್ಯದಲ್ಲಿ ಪರೀಕ್ಷೆಯನ್ನು ರದ್ದು ಪಡಿಸಿ ಮಹ್ತವದ ನಿರ್ಧಾರ ಕೈಗೊಂಡಿದೆ. ಮಕ್ಕಳ ಪಾಲಕರು ಭಯ, ಆತಂಕದಲ್ಲಿದ್ದಾರೆ.
ಒಂದು ವೇಳೆ ಪರೀಕ್ಷೆ ನಡೆಸಿ ಮಕ್ಕಳಿಗೆ ಏನಾದರೂ ಆದರೆ ಅದಕ್ಕೆ ಹೊಣೆ ಯಾರು? ಮಕ್ಕಳ ಜೀವನಕ್ಕಿಂತ ಪರೀಕ್ಷೆ ನಡೆಸುವುದು ಅನಿವಾರ್ಯವೇ? ಈ ಪರೀಕ್ಷೆ ವಿದ್ಯಾರ್ಥಿಗಳ ಜೀವನಕ್ಕಿಂತ ದೊಡ್ಡದೇ? ಮಕ್ಕಳನ್ನು ಅಪಾಯಕ್ಕೆ ದೂಡಿ ಪರೀಕ್ಷೆ ನಡೆಸುವುದು ಸರ್ಕಾರದ ದೊಡ್ಡ ಸಾಧನೆ ಮೆರೆಯಬೇಕಿದೆ ಏನು? ಎಂದು ರಾಜ್ಯ ಸರ್ಕಾರ ಯೋಚಿಸಬೇಕು.
ಪರೀಕ್ಷೆಗಿಂತ ಸಾರ್ವಜನಿಕರ ಜೀವ ಮುಖ್ಯ.ಪರೀಕ್ಷೆ ಬಿಟ್ಟರೇ ಏನಾಗೋದಿಲ್ಲ. ಜೀವ ಹೋದರೆ ತಂದು ಕೊಡಬಹುದೇ ಎಂಬುದನ್ನು ಯೋಚಿಸಿ. ಮಕ್ಕಳ, ಇಲಾಖೆ ಅಧಿಕಾರಿಗಳ ಹಾಗೂ ಶಿಕ್ಷಕರ ಜೀವ ರಕ್ಷಣೆ ಮೊದಲ ಆದ್ಯತೆ ನೀಡಿ ಪರೀಕ್ಷೆ ನಡೆಸುವ ನಿರ್ಧಾರವನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.