ಕಲಬುರಗಿ: ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಉಪಾಧ್ಯಕ್ಷ, ಎಪಿಎಂಸಿ ಮಾಜಿ ಅಧ್ಯಕ್ಷ ಅವ್ವಣ್ಣ ಮ್ಯಾಕೇರಿ ಅವರನ್ನು ವಿಧಾನಪರಿ?ತ್ ಗೆ ನಾಮನಿರ್ದೇಶನ ಮಾಡಬೇಕು ಎಂದು ಕರ್ನಾಟಕ ಟೋಕರಿ ಕೋಲಿ ಕಬ್ಬಲಿಗ ಸಂಘದ ರಾಜ್ಯ ಅಧ್ಯಕ್ಷ ಬಸವರಾಜ ಹರವಾಳ ಬಿಜೆಪಿ ವರಿ? ರಿಗೆ ಆಗ್ರಹಿಸಿದರು.
ಭಾನುವಾರ ನಗರದ ಪಿ.ಆಂಡ್ ಟಿ. ಕ್ವಾಟರ್ಸ್ ಎದುರುಗಡೆ ಇರುವ ಗಣೇಶ ನಗರದಲ್ಲಿರುವ ಸಂಘದ ಕಚೇರಿಯಲ್ಲಿ ಕರೆದ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದ ಅವರು, ಪಕ್ಷದ ನಿ?ವಂತ ಮತ್ತು ಪ್ರಾಮಾಣಿಕ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಜಿಲ್ಲೆಯಲ್ಲಿ ಎರಡೂ ವಿಧಾನಪರಿ?ತ್ ಸದಸ್ಯತ್ವ ಸ್ಥಾನ ಖಾಲಿಯಾಗಲಿದ್ದು, ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯ ದೃಷ್ಟಿಯಿಂದ ಹಿಂದುಳಿದ ಕೋಲಿ ಸಮಾಜಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಿಕೊಡಬೇಕು. ಈ ಹಿಂದೆ ಲೋಕಸಭಾ ಮತ್ತು ಚಿಂಚೋಳಿ ಉಪಚುನಾವಣೆಯಲ್ಲಿ ಇಡೀ ಕೋಲಿ ಸಮಾಜದ ಮತದಾರರು ಬಿಜೆಪಿಗೆ ಬೆಂಬಲಿಸಿದ್ದಾರೆ. ಈ ನಿಟ್ಟಿನಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಅವಿರತ ಶ್ರಮವಹಿಸಿದ ಅವ್ವಣ್ಣ ಮ್ಯಾಕೇರಿ ಅವರನ್ನು ಬಿಜೆಪಿ ವರಿ? ರು ಗುರುತಿಸಿ ರಾಜಕೀಯ ಸ್ಥಾನಮಾನ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ಪರಿ?ತ್ ನಾಮನಿರ್ದೇಶನ ಮಾಡುವ ವೇಳೆ ಮ್ಯಾಕೇರಿ ಹೆಸರು ಮುಂಚೂಣಿಯಲ್ಲಿದ್ದರೂ ಕೊನೆ ಗಳಿಗೆಯಲ್ಲಿ ಕೈತಪ್ಪಿ ಹೋಗಿದೆ. ಅ?ದರೂ ಪಕ್ಷದ ನಾಯಕರ ವಿರುದ್ದ ಮುನಿಸಿಕೊಂಡಿರಲಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ೩೯ ಪರ್ಯಾಯ ಜಾತಿಗಳಿಂದ ಗುರುತಿಸಲ್ಪಡುವ ಕೋಲಿ ಸಮಾಜದ ಜನಸಂಖ್ಯೆ ೫೦ ಲಕ್ಷ ಹೊಂದಿದೆ. ಇನ್ನು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ವಾಗಿ ಮುಖ್ಯ ವಾಹಿನಿಗೆ ಬಂದಿರುವುದಿಲ್ಲ ಎಂದ ಅವರು, ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಅಕಾಡೆಮಿ ಹುಟ್ಟುಹಾಕಿಕೊಂಡು ಮ್ಯಾಕೇರಿ ಅವರು ರಾಜ್ಯಾದ್ಯಂತ ಸುತ್ತಿ ಜನಜಾಗೃತಿ ಮೂಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯೋಗ್ಯ ವಾದ ವ್ಯಕ್ತಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಮನವಿ ಮಾಡಿದರು. ಒಂದು ವೇಳೆ ನಿರ್ಲಕ್ಷಿಸಿದರೆ ಪಂಚಾಯತ್ ಚುನಾವಣೆಯಲ್ಲಿ ಕೋಲಿ ಸಮಾಜದ ಶಕ್ತಿ ತೋರಿಸಬೇಕಾಗುತ್ತದೆ ಎಂದು ಬಸವರಾಜ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ರೇವಣಸಿದ್ದ ಹಲಚೇರ, ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ ಹುಲ್ಲೂರ್ ಇದ್ದರು.