ಕಲಬುರಗಿ: ವಿದ್ಯಾನಗರದ ಮುಖ್ಯ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ ಅನೇಕ ಕೈಬಂಡಿಗಳು, ಡಬ್ಬಿಗಳು ತೆರವು ಗೊಳಸಿ ದಿನವೂ ಓಡಾಡುವ ನೂರಾರು ಪಾದಚಾರಿಗಳಿಗೆ ಅನುಕೂಲ ಮಾಡಿ ಜೊತೆಗೆ ಸ್ವಚ್ಚತಾ ಕಾರ್ಯಕ್ರಮ ಕೂಡಾ ಮಾಡಬೆಕೇಂದು ವಿದ್ಯಾನಗರದ ಶ್ರೀಮಲ್ಲಿಕಾರ್ಜುನ ತರುಣ ಸಂಘದ ಅಧ್ಯಕ್ಷ ಶಿವರಾಜ ಅಂಡಗಿ ಮಾಹನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಹಂದಿಗಳ ಕಾಟ ಹೆಚ್ಚಾಗಿದ್ದು ದಿನಾಲು ರಸ್ತೆಯ ಮೇಲೆ ಹಂದಿ – ನಾಯಿಗಳ ಗುದ್ದಾಟದಿಂದಾಗಿ ಮಕ್ಕಳ,ಮಹಿಳೆಯರು ಭಯಭಿತ ವಾತವರಣ ನಿರ್ಮಾಣವಾಗಿದೆ. ಪಾಲಿಕೆಯ ನೈರ್ಮಲ್ಯ ಅಧಿಕಾರಿಗಳಿಗೆ ಗಮನಕ್ಕೆ ತಂದರು ಭರವಸೆ ನೀಡಿದರು. ವಿಷಯ ಗಂಭೀರವಾಗಿ ಪರಿಗಣಿಸಿ ಹಂದಿಗಳನ್ನು ಹಿಡಿದು ಭಯಮುಕ್ತ ವಾತಾವರಣ ನಿರ್ಮಿಸಿ ಜನರಿಗೆ ಅನುಕೂಲ ಮಾಡಿಕೂಡಬೆಕೇಂದು ಶ್ರೀಮಲ್ಲಿಕಾರ್ಜುನ ತರುಣ ಸಂಘದ ಉಪಾಧ್ಯಕ್ಷ ವಿರೇಶ ನಾಗಶಟ್ಟಿ, ಕಾರ್ಯದರ್ಶಿ ಕರಣ ಆಂದೊಲಾ ಅವರು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.