ಶಹಾಪುರ : ಕರ್ತವ್ಯ ನಿರತ ವ್ಯಕ್ತಿಯೋರ್ವನಿಗೆ ಕೋರೋನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಗೋಗಿಪೇಟ ಗ್ರಾಮದ ಬದ್ದಳ್ಳಿ ಏರಿಯಾ ಸಂಪೂರ್ಣ ಸೀಲ್ ಡೌನ್ ಮಾಡಿದ ಕಾರಣ ಗ್ರಾಮದ ಜನರಲ್ಲಿ ಭಯ ಆತಂಕ ಶುರುವಾಗಿದೆ.ಅಲ್ಲದೇ ಹೊರಗಡೆ ಬರುವುದಕ್ಕೆ ತುಂಬಾ ಹೆದರುತ್ತಿದ್ದಾರೆ.
ಹೋಂಗಾರ್ಡ್ ರೊಬ್ಬರಿಗೆ ತಾಲ್ಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ ಕರ್ತವ್ಯದ ಮೇಲೆ ನಿಯೋಜಿಸಲಾಗಿತ್ತು.ಅವರಿಗೆ ಸೋಂಕು ತಗುಲಿರುವ ಲಕ್ಷಣಗಳು ಕಂಡುಬಂದ ಕೂಡಲೇ ಅವರನ್ನು ಸ್ವಗ್ರಾಮದಲ್ಲಿ ಹೋಮ್ ಕ್ವಾರಂಟೈನ್ ಮಾಡಲಾಗಿತ್ತು.ಆದರೆ ಆ ವ್ಯಕ್ತಿ ಬೇಜವಾಬ್ದಾರಿಯಿಂದ ಮನೆಯಲ್ಲಿ ಇರದೇ ಗ್ರಾಮದ ಹೊರಗೆ ಎಲ್ಲಾ ಕಡೆ ಓಡಾಟ ನಡೆಸಿದ್ದಾನೆ ಅಲ್ಲದೆ ಕೆಲವೊಂದು ಮದುವೆ ಸಮಾರಂಭ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾನೆ.
ಆದ್ದರಿಂದ ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ತಾಲ್ಲೂಕು ಆಡಳಿತ ಮಂಡಳಿ ವತಿಯಿಂದ ಈ ಏರಿಯಾವನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.ಸಾರ್ವಜನಿಕರ ಹಿತದೃಷ್ಟಿಯಿಂದ ಗ್ರಾಮದಲ್ಲಿ ಸ್ವಚ್ಛತೆ ಹಾಗೂ ಎಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಈ ಪ್ರದೇಶದ ಸುತ್ತಮುತ್ತಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಬೇಕು ಎಂದು ಜಿಲ್ಲಾ ದಲಿತ ಸೇನೆಯ ಅಧ್ಯಕ್ಷರಾದ ಅಶೋಕ ಹೊಸಮನಿ ಅವರು ಹೇಳಿದ್ದಾರೆ.