ಸುರಪುರ: ನಗರದ ಶಿಬಾರ ಬಂಡಿಯಲ್ಲಿ ಜಯಕರ್ನಾಟಕ ಸಂಘಟನೆಯ ಗ್ರಾಮ ಶಾಖೆಯನ್ನು ರಚನೆ ಮಾಡಿ ಪದಾಧಿಕಾರಿಗಳನ್ನು ನೇಮಕಗೊಳಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ರವಿ ನಾಯಕ ಬೈರಿಮರಡಿ ಮಾತನಾಡಿ,ಜಯಕರ್ನಾಟಕ ಸಂಘಟನೆ ರಾಜ್ಯದ ಪ್ರಮುಖ ಕನ್ನಡ ಪರ ಸಂಘಟನೆಯಾಗಿದ್ದು, ಲಕ್ಷಾಂತರ ಜನ ಕಾರ್ಯಕರ್ತರು ಮತ್ತು ಮುಖಂಡರು ನಿತ್ಯವು ನಾಡಿನ ಅಭಿವೃಧ್ಧಿಗಾಗಿ ಮತ್ತು ಸಮಸ್ಯೆಗಳ ನಿವಾರಣೆಗೆ ದುಡಿಯುತ್ತಾರೆ.ಕೇವಲ ಹೋರಾಟಗಳು ಮಾತ್ರವಲ್ಲದೆ ಶಿಕ್ಷಣ,ಕುಡಿಯುವ ನೀರು ಮತ್ತು ಪರಿಸರ ಜಾಗೃತಿಯಂತಹ ಜನೋಪಯೊಗಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.ಸಂಘಟನೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕೆಲಸ ಮಾಡಲು ಎಲ್ಲಾ ಕನ್ನಡ ಅಭಿಮಾನಿಗಳು ಸಂಘಟನೆಯೊಂದಿಗೆ ಕೈ ಜೋಡಿಸಿ ನಾಡು ನುಡಿಯ ಅಭೀವೃಧ್ಧಿಗೆ ಮುಂದಾಗಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಶಿಬಾರಬಂಡಿ ಶಾಖೆಗೆ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು. ಗೌರವಾಧ್ಯಕ್ಷರಾಗಿ ಅಮರೇಶ ಪೂಜಾರಿ,ಅಧ್ಯಕ್ಷರಾಗಿ ರಂಗನಾಥ ರಾಮಬಾಣ,ಕಾರ್ಯಾಧ್ಯಕ್ಷರಾಗಿ ಮೌನೇಶ ರಾಮಬಾಣ, ಉಪಾಧ್ಯಕ್ಷರಾಗಿ ರಾಜಪ್ಪ ,ಪ್ರಧಾನ ಕಾರ್ಯದರ್ಶಿಯಾಗಿ ಮೌನೇಶ,ಸಂಘಟನಾ ಕಾರ್ಯದರ್ಶಿಯಾಗಿ ಯಂಕಪ್ಪ,ಸಂಚಾಲಕರಾಗಿ ಚಂದಪ್ಪ,ಖಜಾಂಚಿಯಾಗಿ ಮರೆಪ್ಪ ಹಾಗು ವಕ್ತಾರರನ್ನಾಗಿ ವೆಂಕಟೇಶ ಇವರನ್ನು ನೇಮಕಗೊಳಿಸಲಾಯಿತು.ಈ ಸಂದರ್ಭದಲ್ಲಿ ತಾಲೂಕು ಕಾರ್ಯಾಧ್ಯಕ್ಷ ಶರಣು ಬೈರಿಮರಡಿ, ನಗರ ಘಟಕದ ಅಧ್ಯಕ್ಷ ಮಲ್ಲಪ್ಪ ನಾಯಕ,ಕಾರ್ಯಾಧ್ಯಕ್ಷ ಯಲ್ಲಪ್ಪ ನಾಯಕ,ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಗೋಗಿಕರ್ ಇತರರಿದ್ದರು.