ಪಿಯುಸಿ ಪರೀಕ್ಷಾ ಕೇಂದ್ರಕ್ಕೆ ತಹಸೀಲ್ದಾರ ಸುರೇಶ ವರ್ಮಾ ಭೇಟಿ

0
35

ಶಹಾಬಾದ: ಕೊರೊನಾ ಭೀತಿಯ ಕಾರಣ ಮುಂದೂಡಲಾಗಿದ್ದ ಪಿಯುಸಿ ಇಂಗ್ಲೀಷ ಪರೀಕ್ಷೆ ನಗರದಲ್ಲಿ ಸುಲಲಿತವಾಗಿ ನಡೆದುದಲ್ಲದೇ, ಮುಕ್ತಾಯಗೊಂಡಿದೆ.

ಪರೀಕ್ಷೆ ಸಮಯದಿಂದ ಪರೀಕ್ಷೆ ಮುಗಿಯುವವರೆಗೂ ಸಾಮಾಜಿಕ ಅಂತರ ಕಾಯ್ದುಕೊಂಡಂತಹ ವಿದ್ಯಾರ್ಥಿಗಳು, ಪರೀಕ್ಷೆ ಮುಗಿದ ನಂತರ ಪರೀಕ್ಷಾ ಕೇಂದ್ರದ ಹೊರಗಡೆ ಬಂದು ಸಾಮಾಜಿಕ ಅಂತರ ಪಾಲಿಸಲಿಲ್ಲ. ಅಲ್ಲದೇ ಎಲ್ಲವನ್ನೂ  ಮರೆತು ಮಾತನಾಡುತ್ತ ನಿಂತುಕೊಂಡಂತಹ ಸನ್ನಿವೇಶಗಳು ಕಂಡು ಬಂದವು.

Contact Your\'s Advertisement; 9902492681

ಬೆಳಿಗ್ಗೆ ಪರೀಕ್ಷಾ ಸಮಯದ ವೇಳೆಗಿಂತಲೂ ಒಂದು ಗಂಟೆ ಮುಂಚಿತವಾಗಿ ವಿದ್ಯಾರ್ಥಿಗಳು ಪರೀಕ್ಷೆ ಕೇಂದ್ರದ ಬಳಿ ಬಂದು, ಪರೀಕ್ಷಾ ಕೋಣೆಯನ್ನು ನೋಡಿಕೊಂಡರು. ಒಳಗಡೆ ಪ್ರವೇಶಿಸುವ ಎಲ್ಲಾ ವಿದ್ಯಾರ್ಥಿಗಳನ್ನು ಸಾಮಾಜಿಕ ಅಂತರ ಕಾಯ್ದುಕೊಂಡಿರಲು ಸೂಚಿಸಲಾಯಿತು. ಸುಮಾರು ಮೂರು ಪರೀಕ್ಷಾ ಕೇಂದ್ರದಗಳ ೬೦೦ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರಿನಿಂಗ್ ಮಾಡಿ ಒಳ ಬಿಡಲಾಯಿತು.ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಿ, ಅಂತರ ಕಾಯ್ದುಕೊಂಡು ಪರೀಕ್ಷಾ ಬರೆಯಲು ಸಮರ್ಪಕ ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದಕ್ಕೆ ಬರಲು ತೊಂದರೆಯಾಗದಂತೆ ಕೆಎಸ್‌ಆರ್‌ಟಿಸಿ ಉಚಿತ ಬಸ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಪರೀಕ್ಷಾ ಕೇಂದ್ರದಕ್ಕೆ ತಹಸೀಲ್ದಾರ ಸುರೇಶ ವರ್ಮಾ ಬೇಟಿ ನೀಡಿ, ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆಯನ್ನು ಬರೆವುದರ ಜತೆಗೆ ಕಡ್ಡಾಯವಾಗಿ ಮಾಸ್ಕ್‌ಗಳನ್ನು ಧರಿಸಬೇಕೆಂದು ಸೂಚಿಸಿದರು.

ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ಸಿಬ್ಬಂದಿಗಳು ಪರೀಕ್ಷೆ ಮುಗಿಯುವವರೆಗೂ ನಿರತರಾಗಿದ್ದರು. ಪರೀಕ್ಷಾ ಕೇಂದ್ರದ ಸುತ್ತಲೂ ಕಲಂ೧೪೪ ಸೆಕ್ಷನ್ ಪ್ರಕಾರ ನಿಷೇದಾಜ್ಞೆ ಜಾರಿಯಲ್ಲಿತ್ತು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here