ಕಕ್ಕೇರಾ ಎಸ್‌ಬಿಐ ವ್ಯವಸ್ಥಾಪಕರ ಅಮಾನತ್ತಿಗೆ ಒತ್ತಾಯಿಸಿ ಪ್ರತಿಭಟನೆ

0
128

ಸುರಪುರ: ತಾಲ್ಲೂಕಿನ ಕಕ್ಕೇರಾ ಗ್ರಾಮದಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರು ನಿಯಮದಂತೆ ಸಾಲ ವಿತರಿಸಿದೆ ಅಕ್ರಮ ನಡೆಸಿದ್ದಾರೆ.ಆದ್ದರಿಂದ ಈ ವ್ಯವಸ್ಥಾಪಕರನ್ನು ಕೂಡಲೆ ಅಮಾನತ್ತುಗೊಳಿಸುವಂತೆ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಆಕ್ರೋಶ ವ್ಯವಕ್ತಪಡಿಸಿದರು.

ನಗರದ ಹಸನಾಪುರ ಪೆಟ್ರೋಲ್ ಬಂಕ್ ಬಳಿಯ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಲ್ಲಿ ಅರೆಬೆತ್ತಲೆ ರಸ್ತೆ ತಡೆ ನಡೆಸಿ ಮಾತನಾಡಿ,ಒಂದು ಎಕರೆ ಜಮೀನಿರುವವರಿಗೆ ಐವತ್ತು ಸಾವಿರ ರೂಪಾಯಿಗಳ ವರೆಗೆ ಸಾಲ ನೀಡಬಹುದು ಎಂದು ಸರಕಾರದ ನಿಯಮವಿದೆ ಆದರೆ ಕಕ್ಕೇರಾ ಎಸ್‌ಬಿಐ ಶಾಖೆ ವ್ಯವಸ್ಥಾಪಕರು ಮತ್ತು ಫೀಲ್ಡ್ ಆಫಿಸರ್ ಸೇರಿ ಒಂದು ಎಕರೆ ಹದಿನೈದು ಗುಂಟೆ ಜಮೀನಿರುವವರಿಗೆ ಆರು ಲಕ್ಷದ ವರೆಗೆ ಸಾಲ ನೀಡಿ ಸರಕಾರದ ನಿಯಮ ಉಲ್ಲಂಘಿಸಿದ್ದಾರೆ.ಇದೊಂದೆ ಘಟನೆಯಲ್ಲದೆ ಇಂತಹ ಅನೇಕ ಪ್ರಕರಣಗಳು ನಡೆದಿವೆ ಎಂದು ಆರೋಪಿಸಿದರು.

Contact Your\'s Advertisement; 9902492681

ಸರಕಾರದ ಹಣವನ್ನು ತಮ್ಮಿಷ್ಟದಂತೆ ನಿಯಮಗಳ ಮೀರಿ ಸಾಲ ವಿತರಿಸಿ ಇತರೆ ರೈತರಿಗೆ ಸಾಲ ದೊರೆಯದಂತೆ ಮಾಡುತ್ತಿದ್ದಾರೆ.ಆದ್ದರಿಂದ ಸರಕಾರ ಮತ್ತು ಸಿಸಿಬಿ ಅಧಿಕಾರಿಗಳು ಈ ಶಾಖೆಯಲ್ಲಿ ನಡೆದಿರುವ ಕಾನೂನು ಬಾಹಿರ ಸಾಲ ವಿತರಣೆ ಪ್ರಕರಣಗಳ ತನಿಖೆ ನಡೆಸಬೇಕು ಮತ್ತು ಇಂತಹ ಪ್ರಕರಣಕ್ಕೆ ಕಾರಣವಾಗಿರುವ ಶಾಖೆ ವ್ಯವಸ್ಥಾಪಕರನ್ನು ಮತ್ತು ಫೀಲ್ಡ್ ಆಫೀಸರನ್ನು ಅಮಾನತ್ತುಗೊಳಿಸಬೇಕು.ಇಲ್ಲವಾದಲ್ಲಿ ಶಾಖಾ ಕಚೇರಿ ಮುಂದೆ ಮತ್ತು ತಾಲ್ಲೂಕು ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸರಕಾರಕ್ಕೆ ಎಚ್ಚರಿಸಿದರು.ನಂತರ ಕೇಂದ್ರ ಅಪರಾಧ ದಳದ ಆಯುಕ್ತರಿಗೆ ಬರೆದ ಮನವಿಯನ್ನು ತಹಸೀಲ್ ಸಿರಸ್ತೆದಾರ ನಾಸಿರ್ ಅಹ್ಮದ ಮೂಲಕ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಗೋಪಾಲ ಬಾಗಲಕೋಟೆ,ಮಾನಯ್ಯ ದೊರೆ,ಕೃಷ್ಣಾ ದಿವಾಕರ,ಕೇಶಣ್ಣ ದೊರೆ,ಬಸವರಾಜ ಕವಡಿಮಟ್ಟಿ,ದೇವಪ್ಪ ದೇವರಮನಿ,ದೇವರಾಜ ಮದಕರಿ,ದೇವಿಂದ್ರಪ್ಪ ತಿಪ್ಪನಟಿಗಿ,ತಿರುಪತಿ ದೊರೆ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here