ಕಲಬುರಗಿ: ನಗರದ ಕುಸನೂರ ರಸ್ತೆಯಲ್ಲಿರುವ ಪೂಜಾ ಕಾಲೋನಿಯ ಹನುಮಾನ ಮಂದಿರದ ಹತ್ತಿರದಲ್ಲಿ ಕಲ್ಯಾಣ ಕರ್ನಾಟಕ ಬಹುಜನ ಶಿಕ್ಷಣ ಸಂಸ್ಥೆಯ ವತಿಯಿಂದ ೧೦೦ ಸಸಿ ನೆಡುವ ಕಾರ್ಯಕ್ರಮಕ್ಕೆ ಮಾಜಿ ಮಹಾಪೌರರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶರಣಕುಮಾರ ಎಮ್. ಮೋದಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್ ಠಾಕೂರ, ಡಾ. ಶಂಕರ ಬಾಳಿ, ಕೆ. ಪ್ರಕಾಶ, ಸುನೀಲ್ ಚವ್ಹಾಣ, ಡಾ. ನಾಗರತ್ನ ಬಿ. ದೇಶಮಾನ್ಯೆ, ಸುನೀಲ್ ಕುಮಾರ ಹೆಚ್. ಮದನ ಶರಣಪ್ಪಾ ಸೇರಿದಂತೆ ಇನ್ನಿತರರು ಇದ್ದರು.