ಸೂರ್ಯಗ್ರಹಣದ ಸಂದರ್ಭದಲ್ಲಿ ಮಕ್ಕಳನ್ನು ಮಣ್ಣಲ್ಲಿ ಹೂತರೆ ಕೊಲೆ ಪ್ರಕರಣ ದಾಖಲು: ಪಿ.ಎಸ್.ಐ ವಿಜಯಕುಮಾರ್ ಬಾವಗಿ ಎಚ್ಚರಿಕೆ

0
69

ಕಲಬುರಗಿ: ನಾಳೆ ಭಾನುವಾರ ಸೂರ್ಯ ಗ್ರಹಣದ ವೇಳೆ ಮೌಡ್ಯಾಚಾರಣೆಗೆ ಬಲಿಯಾಗಿ ಮಕ್ಕಳನ್ನು ಮಣ್ಣಲಿ ಹೂತರೆ, ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗಿವುದು ಎಂದು ವಾಡಿ‌ ಪೋಲಿಸ್ ಠಾಣೆ ಪಿಎಸ್ ಐ ವಿಜಯಕುಮಾರ್ ಬಾವಗಿ ಎಚ್ಚರಿಕೆ ನೀಡಿದರು.

ಇಂದು ಠಾಣೆಯಲ್ಲಿ ಕರೆಯಲಾಗಿದ ಮೌಡ್ಯಾಚಾರಣೆ ವಿರೋಧಿಸಿ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೌಢ್ಯಾಚರಣೆಗೆ ಕಾನೂನಿನಲ್ಲಿ ಅವಕಾಶವಿಲ್ಲ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಸಾಮಾಜಿಕ ಕಾರ್ಯಕರ್ತರು ಮತ್ತು ಮಾಧ್ಯಮ ಮಿತ್ರರು ಮಾಡಬೇಕು ಕರೆ ನೀಡಿದರು.

Contact Your\'s Advertisement; 9902492681

ಸೂರ್ಯಗ್ರಹಣ ವೇಳೆ ಮೌಡ್ಯಾಕ್ಕೆ ಬಲಿಯಾಗಿ ಹಸುಗೂಸುಗಳನ್ನು ಮಣ್ಣಿನಲ್ಲಿ ಹೂತುಹಾಕಿ ಮಕ್ಕಳಿಗೆ ಹಿಂಸೆ ನೀಡುವುದನ್ನು ನಿಲ್ಲಿಸಬೇಕು. ಈ ಮೌಡ್ಯಾಚಾರಣೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಒಂದು ವೇಳೆ ಸರ್ಕಾರದ ಆದೇಶ ಉಲ್ಲಂಘಿಸಿ ಮೌಡ್ಯಾ ಆಚರಿಸಿದರೆ ಅಂತವರ ವಿರುದ್ಧ ಕೊಲೆ ಪ್ರಕರಣ ದಡಿ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿ, ಸರಕಾರದ ಆದೇಶ ಪಾಲಿಸಬೇಕೆಂದು ಮನವಿ ಮಾಡಿದ್ದಾರೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here