ಸುರಪುರ: ವಿಶ್ವ ಯೋಗ ದಿನದ ಅಂಗವಾಗಿ ಶಾಸಕ ನರಸಿಂಹ ನಾಯಕ (ರಾಜುಗೌಡ) ಬೆಂಗಳೂರಿನ ತಮ್ಮ ನಿವಾಸದಲ್ಲಿ ಯೋಗ ದಿನ ಆಚರಿಸಿದರು.
ಕೊರೊನಾ ಲಾಕ್ಡೌನ್ ಕಾರಣದಿಂದ ಈ ಬಾರಿಯ ಸಾರ್ವಜನಿಕವಾಗಿ ಯೋಗ ದಿನ ಆಚರಣೆಗೆ ಅವಕಾಶವಿಲ್ಲದ ಕಾರಣದಿಂದ ಏಕಾಂಗಿಯಾಗಿ ತಮ್ಮ ನಿವಾಸದಲ್ಲಿ ಯೋಗ ದಿನಾಚರಣೆ ನಡೆಸಿದರು.
ಅದರಂತೆ ಬಿಜೆಪಿ ಪಕ್ಷದ ಎಸ್ಟಿ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಶರಣು ನಾಯಕ ಬೈರಿಮರಡಿ ಹಾಗು ಅವರ ಸಹೋದರ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಹಾಗು ಮಂಜುನಾಥ ನಾಯಕ ಮತ್ತು ಕುಟುಂಬಸ್ಥರು ತಮ್ಮ ಮನೆಯಲ್ಲಿ ಯೋಗ ದಿನವನ್ನು ಆಚರಿಸಿದರು.