ಸುರಪುರ: ತಾಲೂಕಿನ ಕೆಂಭಾವಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ಸಾಂಕೇತಿಕ ಪ್ರತಿಭಟನೆ ನಡೆಸಿ ಅಯೋಧ್ಯೆಯಲ್ಲಿ ದೊರೆತ ಬೌದ್ಧ ಸ್ತೂಪಗಳ ರಕ್ಷಣೆಗೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಸಂಚಾಲಕ ಶರಣಪ್ಪ ಗಾಯಕ್ವಾಡ ಮಾತನಾಡಿ, ಇಂದು ಅಯೋಧ್ಯೆಯಲ್ಲಿ ಶ್ರೀರಾಮನ ಜನ್ಮಸ್ಥಳ ಎಂದು ಹೇಳಲಾಗುತ್ತಿತ್ತೋ ಆ ಸ್ಥಳದಲ್ಲಿ ರಾಮನ ಮಂದಿರ ಕಟ್ಟಲು ಮುಂದಾಗಿ ಸ್ಥಳ ಅಗೆಯುವಾಗ ಅನೇಕ ಬುದ್ಧನ ಸ್ತೂಪಗಳ ಸಿಗುತ್ತಿವೆ.ಅಶೋಕ ಚಕ್ರವರ್ತಿಯ ಕಾಲದ ಸ್ತೂಪಗಳಿರಬಹುದು ಎಂದು ಅನೇಕರು ಅಂದಾಜಿಸುತ್ತಿದ್ದಾರೆ. ಇದರಿಂದ ತಿಳಿಯುತ್ತಿದೆ ಈ ಸ್ಥಳ ಬುದ್ಧನ ಸ್ಮಾರಕಕ್ಕೆ ಸಂಬಂಧಿಸಿದ್ಧೆಂದು.ಆದ್ದರಿಂದ ಸರ್ಕಾರ ಕೂಡಲೆ ಈ ಸ್ಥಳದಲ್ಲಿ ನಡೆಯುತ್ತಿರುವ ಕಾರ್ಯವನ್ನು ಸ್ಥಗಿತಗೊಳಿಸಿ ಈಗ ದೊರೆತಿರುವ ಬುದ್ಧನ ಸ್ತೂಪಗಳನ್ನು ಸಂರಕ್ಷಣೆ ಮಾಡಬೇಕು.ಇಲ್ಲವಾದರೆ ರಾಷ್ಟ್ರದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕೆಂಭಾವಿ ಹೋಬಳಿಯ ಉಪ ತಹಸೀಲ್ದಾರ್ ಕಚೇರಿ ಮುಂದೆ ಸೇರಿದ್ದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಸ್ತೂಪಗಳ ರಕ್ಷಣೆಗೆ ಆಗ್ರಹಿಸಿದರು.ನಂತರ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ಕಂದಾಯ ಅಧಿಕಾರಿಗಳ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಂಗಣ್ಣ ಚಿಂಚೋಳಿ ಜಗದೀಶ್ ಬಡಿಗೇರ ಆರ್.ಎಸ್.ಮಾಲಗತ್ತಿ ಬಸವರಾಜ ಕಂಬಾರ ಗೋಪಾಲ ಬಡಿಗೇರ ಸಿದ್ದಣ್ಣ ಹದನೂರ ಇದ್ದರು.