ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ವಕೀಲರು ಕೊರೊನಾ ಮಹಾಮಾರಿ ಅವಧಿಯಿಂದ ಸಂಕಷ್ಟ ಕಾಲದಲ್ಲಿ ಹಿತಕಾಯಲು 371 ಜೆ ಅಡಿಯಲ್ಲಿ ವಿಶೇಷ ಧನ ಸಹಾಯ ಮಾಡಲು ಕಲ್ಯಾಣ ಕರ್ನಾಟಕ ನ್ಯಾಯವಾದಿಗಳ ಹಿತರಕ್ಷಣಾ ಹೋರಾಟ ಸಮಿತಿ ಒತ್ತಾಯಿಸಿದೆ.
ಈ ವೇಳೆಯಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಜಾಗ್ರತಿ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಜೇ. ವಿನೋದ ಕುಮಾರ ಎಸ್ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಿ ಕಳೆದ 4 ತಿಂಗಳು ನಿಂದ ಕೆಲಸ ಕಾರ್ಯಗಳಿಲ್ಲದೆ, ಮಾರ್ಚ್ 10 ರಿಂದ ಜೂನ್ 20 ರವರಿಗೆ ದಿನನಿತ್ಯದ ಆದಾಯ ವಂಚಿತರಾಗಿದ್ದು, ತುರ್ತಾಗಿ KKRDB ಅಡಿಯಲ್ಲಿ ಕನಿಷ್ಠ 11 ಕೋಟಿ, ವಿಶೇಷ ಅನುದಾನ ಬಿಡುಗಡೆಗೊಳಿಸಿ ಹಿಂದುಳಿದ ವಕೀಲರ ಹಿತಕಾಪಾಡಲು ಅಗ್ರಹಿಸಿದ್ದಾರೆ.