ಅನೈತಿಕ ಚಟುವಟಿಕೆಗಳ ತಾಣವಾದ ಸಗರ ಬಸ್ ನಿಲ್ದಾಣ

0
58
  • ಬಸವರಾಜ ಸಿನ್ನೂರು

ಶಹಾಪುರ: ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸರಕಾರ ನಿರ್ಮಿಸಿರುವ ಸಗರ ಬಸ್ ನಿಲ್ದಾಣ ಎಂದು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಶಿವಶರಣ ಕೂಡ್ಲೂರು ಆರೋಪಿಸಿದ್ದಾರೆ.

ರಾತ್ರಿಯಾಗುತ್ತಿದ್ದಂತೆ ಅನೈತಿಕ ಚಟುವಟಿಕೆಗಳು ನಡೆಯುತ್ತವೆ ಎಲ್ಲೆಂದರಲ್ಲಿ ಕುಡಿತದ ಬಾಟಲಿಗಳು ಇನ್ನಿತರ ವಸ್ತುಗಳು ಬಿದ್ದಿರುತ್ತವೆ ಅಲ್ಲದೆ ಮಲಮೂತ್ರ ವಿಸರ್ಜನೆಯು ಮಾಡುತ್ತಾರೆ ಹತ್ತಿರದಲ್ಲಿ ಶಾಲೆಯ ಇರುವುದರಿಂದ ದುರ್ವಾಸನೆ ಬೀರುತ್ತದೆ ವಿದ್ಯಾರ್ಥಿಗಳಿಗೆ ಇದರಿಂದ ತುಂಬಾ ತೊಂದರೆಯಾಗುತ್ತಿದೆ.

Contact Your\'s Advertisement; 9902492681

ಕಿಡಿಗೇಡಿಗಳು ಕಿಟಕಿಯ ಗಾಜು ಹೊಡೆದು ಹಾಕಿದ್ದಾರೆ ಬಾಗಿಲುಗಳು ಮತ್ತು ಆಸನಗಳು ಹೊತ್ತೊಯ್ದಿದ್ದಾರೆ. ಪ್ರಯಾಣಿಕರು ಯಾರು ಒಳಗೆ ಬರದಂತ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿದೆ. ಸರಕಾರಿ ಬಸ್ಸುಗಳಂತೂ ಬಸ್ ನಿಲ್ದಾಣದ ಒಳಗಡೆ ಒಮ್ಮೆಯಾದರೂ ಬರುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಸಂಬಂಧಪಟ್ಟ ಅಧಿಕಾರಿಗಳು ಇತ್ತ ಸಗರ ಬಸ ನಿಲ್ದಾಣದ ಸಮಸ್ಯೆ ಕುರಿತು ಗಮನ ಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಜೊತೆಗೆ ಕೊಠಡಿ ನಿಯಂತ್ರಕರನು ನೇಮಿಸಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here