ಬಿಬಿ ರಜಾ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಕಲ ಸಿದ್ಧತೆ: ನೀರಿನ ಬಾಟಲ್ ತರಲು ಪರೀಕ್ಷಾರ್ಥಿಗಳಿಗೆ ಮನವಿ

0
21
  • ಸಾಜಿದ್ ಅಲಿ

ಕಲಬುರಗಿ: ಖಾಜಾ ಎಜುಕೇಶನ್ ಸೊಸೈಟಿಯ ಬಿ ಬಿ ರಾಜಾ ಬಾಲಕಿಯರ ಪ್ರೌಢ ಶಾಲೆಯಲ್ಲಿ ಜೂನ್ 25 ರಿಂದ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಪೂರ್ವ ಸಿದ್ಧತೆ ನಡೆಸಲಾಯಿತು.

ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯಾರ್ಥಿಗಳಿಗೆ ಸ್ಕ್ರೀನಿಂಗ್, ಹ್ಯಾಂಡ್ ಸ್ಯಾನಿಟೈಜಿಂಗ್ ಮತ್ತು ಮಾಸ್ಕ್ ಕಡ್ಡಾಯಗೊಳಿಸಲಾಗಿದೆ ಎಂದು ಪರೀಕ್ಷಾ ಮುಖ್ಯಸ್ಥ ಮತ್ತು ಶಾಲೆಯ ಪ್ರಾಂಶುಪಾಲರಾದ ಮಹೇ ಜಬೀನ್ ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಪರೀಕ್ಷಾ ಕೇಂದ್ರದಲ್ಲಿ ಒಟ್ಟು 427 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದು, 21 ತರಗತಿ ಕೊಠಡಿಗಳು ಮತ್ತು ಅಧಿಕ ತಾಪಮಾನದ ಹೊಂದಿರುವ 2 ಕೊಠಡಿ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಸಹಾಯಕ ಪರೀಕ್ಷಾ ಮುಖಸ್ಥರಾದ ಶುಗುಫ್ತಾ ಬೇಗಂ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸೂಕ್ತವಾದ ಪ್ಯಾಡ್, ಕಂಪಾಸ್ ಬಾಕ್ಸ್ ಮತ್ತು ಕುಡಿಯಲು ನೀರಿನ ಬಾಟಲ್ ಜೊತೆಗೆ ತರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here