ಸಹಕಾರ ಬ್ಯಾಂಕ್‌ನಲ್ಲಿನ ಪೈಪ್‌ಲೈನ್ ಸಾಲ ಮನ್ನಾಕ್ಕೆ ಸಚಿವರಿಗೆ ಮೊರೆ

0
32

ಕಲಬುರಗಿ: ಜಿಲ್ಲಾ ಸಹಕಾರ ಬ್ಯಾಂಕಿನಲ್ಲಿ ರೈತರು ಪಡೆದಿರುವ ಪೈಪ್‌ಲೈನ್ ಸಾಲವನ್ನು ರಾಜ್ಯ ಸರ್ಕಾರವು ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಶುಕ್ರವಾರ ರಾಜ್ಯದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ ಅವರಿಗೆ ಶುಕ್ರವಾರ ರೈತರು ಮನವಿ ಪತ್ರ ಸಲ್ಲಿಸಿದರು.

ಇಡೀ ದೇಶದಲ್ಲಿ ಮಹಾಮಾರಿ ಕೊರೋನಾ ಸೋಂಕು ಹರಡಿದ್ದರಿಂದ ರೈತರು ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಆದ್ದರಿಂದ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಕೋರಿದರು.

Contact Your\'s Advertisement; 9902492681

ಜಿಲ್ಲಾ ಸಹಕಾರ ಬ್ಯಾಂಕ್‌ನಲ್ಲಿ ರೈತರು ಪಡೆದಿರುವ ಪೈಪ್‌ಲೈನ್ ಸಾಲ ಹಾಗೂ ಅಭಿವೃದ್ಧಿ ಸಾಲ ಮನ್ನಾ ಮಾಡುವಂತೆ ಹಾಗೂ ಮೂರು ತಿಂಗಳು ಅವಧಿಯವರೆಗೆ ಸಾಲ ಮರುಪಾವತಿಗೆ ಅವಕಾಶ ಕೊಡುವಂತೆ ಅವರು ಒತ್ತಾಯಿಸಿದರು.

ಈ ಸಂದಭದಲ್ಲಿ ಭೀಮಾಶಂಕರ್ ವಿಭೂತಿ ನೆಲೋಗಿ, ಚಂದ್ರಶೇಖರ ಹಿರೇಮಠ ಹುಲ್ಲೂರು, ಮಲ್ಲಣಗೌಡ ಪಾಟೀಲ್ ನೆಲೋಗಿ, ಸಿದ್ದಯ್ಯ ಚಿಂಚೋಳಿ, ಗುರುನಾಥ ನೆಲೋಗಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here