ಹಗಲಿರುಳು ಜನ ಸೇವೆಗೆಂದೇ ಜೀವನ ಸವೆಸುವ ನಮ್ಮ ಸಾರಿಗೆ ಆಶಾ ಕಿರಣವಾಗಲಿ ನೌಕರರ ಪಾಲಿಗೆ “ಲಕ್ಷ್ಮಣ ಸವದಿ”ಸಚಿವರು ಸಾರಿಗೆ
ಕರೊನಾದಂತ ಮಹಾಮಾರಿ ರೋಗ ಜಗತ್ತನ್ನೇ ಕಂಗೆಡಿಸಿರುವಾಗ ಅಂಜದೆ ಅಳುಕದೆ ಸಾರಿಗೆ ಮಂದಿ ದಿಟ್ಟತನದಿ ಸೇವೆ ನೀಡಿದ್ದೇವೆ ನಾವು
ಕರೊನಾದ ಕೆನ್ನಾಲಿಗೆಗೆ ಸಿಲುಕದೆ ರಾಜ್ಯ ಅಂತರಾಜ್ಯ ಜನರನು ಸುರಕ್ಷಿತವಾಗಿ ಮನೆ ತಲುಪಿಸಿದ್ದೇವೆ ನಾವು ಮಾತ್ರ ಕುಟುಂಬ ತೊರೆದು ನಿಂತಿದ್ದೇವೆ…
“ಹತ್ತನೇ ತರಗತಿ” ಮಕ್ಕಳ ಸುರಕ್ಷತೆಗೆ ಹತ್ತಾರು ಸುರಕ್ಷತಾ ಕ್ರಮವನುಸರಿಸಿ ನಿರ್ಭಿತಿಯಿಂದ ಪರೀಕ್ಷೆ ಎದುರಿಸುವ ಅವರ ಗೆಲುವಿಗೆ ಮುನ್ನುಡಿ ಬರೆದಿದ್ದೇವೆ
ಆತಂಕದ ನಡಿವೆಯೂ ಜನ ಸಾಮಾನ್ಯರಿಗೆ “ನಿರಾತಂಕದ ನಿರಂತರ ಸೇವೆ” ನೀಡಿ ಸಾಮಾಜಿಕ ಅಂತರ ಕಾಪಾಡುತಲಿ ಜನ ಸೇವೆಗೆ ಟೊಂಕಕಟ್ಟಿ ನಿಂತಿದ್ದೇವೆ
ಗಗನದತ್ತ ಸಾಗುತಿರಲು ಇಂಧನ ಬೆಲೆ ಪಾತಾಳದತ್ತ ಸಾರಿಗೆ ಆದಾಯದ ನೆಲೆ ಆದರೂ ಓಡುತ್ತಿವೆ ಸಾರಿಗೆ ಬಸ್ಸು ನಷ್ಟದಲೆ ಸರ್ಕಾರ ನೀಡಲಿ 1.30 ಲಕ್ಷ ಕುಟುಂಬಕೆ ನೆಲೆ
ಆಭಾರಿ ಕರ್ನಾಟಕ ಘನ ಸರ್ಕಾರಕೆ ಕೈ ಹಿಡಿದು ಕಾಪಾಡಿದ ಮುಖ್ಯಮಂತ್ರಿಗಳಿಗೆ ಸಾರಿಗೆ ಮಂತ್ರಿ, ಆಡಳಿತ ವರ್ಗದೆಲ್ಲರಿಗೂ “ದುಡಿವ ನಮ್ಮೆಲ್ಲ ತೋಳುಗಳಿಗೆ” ಶಕ್ತಿ ಬೇಡುತ ಕರ ಮುಗಿವೇವು ದೇವರಿಗೆ….