ಸುರಪುರ ಬಸ್ ಡಿಪೋ ಸೀಲ್‌ಡೌನ್ ಮಾಡಿ ಜನರ ರಕ್ಷಿಸಿ: ರಾಜಾ ಅಪ್ಪಾರಾವ್ ನಾಯಕ

0
80

ಸುರಪುರ: ನಗರದ ಬಸ್ ಡೀಪೊದಲ್ಲಿನ ಐವರು ಚಾಲಕ ಮತ್ತು ನಿರ್ವಾಹಕರಿಗೆ ಕೊರೊನಾ ಸೊಂಕು ತಗುಲಿದ್ದರಿಂದ ಕೂಡಲೆ ಬಸ್ ಡೀಪೊ ಸೀಲ್‌ಡೌನ್ ಮಾಡುವಂತೆ ಲೋಕ ಜನಶಕ್ತಿ ಪಕ್ಷದ ಯಾದಗಿರಿ ಜಿಲ್ಲಾಧ್ಯಕ್ಷ ರಾಜಾ ಅಪ್ಪಾರಾವ್ ನಾಯಕ ಒತ್ತಾಯಿಸಿದರು.

Contact Your\'s Advertisement; 9902492681

ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಮಾಡಿ ಮಾತನಾಡಿ,ಈಗಾಗಲೇ ಡೀಪೊದ ಐದು ಜನರಲ್ಲಿ ಕೊರೊನಾ ಸೊಂಕು ತಗುಲಿದ್ದರಿಂದ ಡೀಪೊ ಬಳಿಯಲ್ಲಿ ಶಾಲಾ ಕಾಲೇಜುಗಳಿವೆ ಅಲ್ಲದೆ ಡೀಪೊ ಮುಂದೆಯೆ ಹೋಟೆಲ್‌ಗಳಿದ್ದು ನೂರಾರು ಜನರು ಊಟ ತಿಂಡಿಗೆ ಬರುತ್ತಾರೆ.ಇದರಿಂದ ಎಷ್ಟೊಂದು ಜನರಿಗೆ ಸೊಂಕು ತಗಲುವುದೊ ಗೊತ್ತಿಲ್ಲ.ಅಲ್ಲದೆ ಈಗ ಸೊಂಕು ತಗುಲಿರುವ ಐದು ಜನರಿಂದ ಡೀಪೊದಲ್ಲಿಯ ಎಷ್ಟು ಜನರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ ಎಂಬುದು ಗೊತ್ತಿಲ್ಲ.ಇದರಿಂದ ಮುಂದೆ ಇನ್ಯಾವ ಅಪಾಯ ಕಾದಿದೆಯೊ ಗೊತ್ತಿಲ್ಲ.ಆದ್ದರಿಂದ ಮುಂದಾಗುವ ಅನಾಹುತವನ್ನು ತಪ್ಪಿಸಲು ಕೂಡಲೆ ಸೀಲ್‌ಡೌನ್ ಮಾಡುವಂತೆ ಆಗ್ರಹಿಸಿದರು.

ಕೂಡಲೆ ಬಸ್ ಡೀಪೊವನ್ನು ಸೀಲ್‌ಡೌನ್ ಮಾಡಿ ಜನರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಲೋಕ ಜನಶಕ್ತಿ ಪಕ್ಷದಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿ ಜಿಲ್ಲಾಧಿಕಾರಿಗೆ ಬರೆದ ಮನವಿಯನ್ನು ಗ್ರೇಡ್-೨ ತಹಸೀಲ್ದಾರ ಸೂಫಿಯಾ ಸುಲ್ತಾನರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಹಯ್ಯಾಳಪ್ಪ ಹೊನಕೇರಿ,ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂ.ಡಿ.ರಫೀಕ್ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here