ಶಹಾಬಾದ: ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯಿಂದ ಜನಸಾಮಾನ್ಯರ ಮೇಲೆ ಹೊರೆಯಾಗುತ್ತಿದ್ದರೂ, ಕೇಂದ್ರ ಸರ್ಕಾರ ಅದನ್ನು ಕಡಿಮೆಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಮರಾವ ಸೂರನ್ ಹೇಳಿದರು.
ಅವರು ಮಂಗಳವಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ತಡೆಗಟ್ಟಬೇಕೆಂದು ಒತ್ತಾಯಿಸಿ ಮಂಗಳವಾರ ಜೆಡಿಎಸ್ ಪಕ್ಷದ ವತಿಯಿಂದ ನಗರದ ಅಂಬೇಡ್ಕರ್ ಪ್ರತಿಮೆಯ ಬಳಿ ಆಯೋಜಿಸಲಾದ ಪ್ರತಿಭಟನೆಯಲ್ಲಿ ಮಾತನಾಡಿದರು.
ಯುಪಿಎ ಅಧಿಕಾರಿದ ಸಮಯದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ಏರಿಕೆ ಖಂಡಿಸಿ ಬಿಜೆಪಿ ದೇಶದಾಧ್ಯಂತ ಪ್ರತಿಭಟನೆ ಮಾಡಿ, ಬೊಬ್ಬೆ ಹೊಡೆಯುತ್ತಿದ್ದರು.ಈಗ ತಮ್ಮದೇ ಅಧಿಕಾರ ಕೇಂದ್ರದಲ್ಲಿದೆ. ಆದರೆ ಇಂದು ಕಂಡು ಕಾಣದಂತೆ ವರ್ತನೆ ಮಾಡುತ್ತಿರುವುದು ನೋಡಿದರೇ ಇದಕ್ಕಿಂತ ನಿರ್ಲಜ್ಯ ಸರ್ಕಾರ ಹಿಂದೆಂದೂ ನೋಡಿಲ್ಲ ಎಂದು ಹರಿಹಾಯ್ದರು.
ದೇಶದಲ್ಲಿ ಕಳೆದ ಇಪ್ಪತ್ತು ದಿನಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ೧೦ ರೂ. ಹೆಚ್ಚಳವಾಗಿದೆ.ಇದರಿಂದ ಜನಸಾಮಾನ್ಯರ ಮೇಲೆ ಹೊರೆ ಬೀಳುತ್ತಿದ್ದರೂ, ಕೇಂದ್ರ ಸರ್ಕಾರ ಯಾವುದಕ್ಕೂ ಲೆಕ್ಕ ಹಾಕದೇ ಮತ್ತೆ ಜನಸಾಮನ್ಯರ ಬದುಕಿಗೆ ಕೊಡಲಿ ಪೆಟ್ಟು ಹಾಕುತ್ತಿರುವುದು ದುರಂತ. ಪೆಟ್ರೋಲ್ ಮತ್ತಿಡಿಸೇಲ್ ಮೇಲೆ ಸುಮಾರು ೩೨ ರೂ. ತೆರಿಗೆ ಹಾಕುತ್ತಿದೆ. ಈ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಕೇವಲ ೩.೪೫ ರೂ. ತೆರಿಗೆ ಹಾಕಲಾಗುತ್ತಿತ್ತು. ಸುಮಾರು ೨೮.೩೭ ರೂ. ತೆರಿಗೆ ಹೆಚ್ಚಳ ಮಾಡುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಅಚ್ಚೆ ದಿನ ಬರುವಂತೆ ಮಾಡಿದ್ದಾರೆ ಎಂದು ವ್ಯಂಗವಾಡಿದರು. ಕೂಡಲೇ ಜನವಿರೋಧಿ ನೀತಿಯನ್ನು ಕೈಬಿಟ್ಟು ತೈಲಬೆಲೆಯ ತೆರಿಗೆಯನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ಅಧ್ಯಕ್ಷ ರಾಜ ಮಹ್ಮದ ರಾಜಾ, ಪ್ರಧಾಣ ಕಾರ್ಯದರ್ಶಿ ಲೋಹಿತ್ ಕಟ್ಟಿ, ಮೈನೊದ್ದೀನ್, ನಾಮದೇವ ಕಾಂಬಳೆ, ನಗರಸಭೆ ಸದಸ್ಯ ಅಮ್ಜದ ಹುಸೇನ, ಅಬ್ದುಲ್ ಜಬ್ಬಾರ, ವಿಜಯಲಕ್ಷ್ಮೀ ಬಂಗರಗಿ, ಮಹ್ಮದ ಚಾಂದ ವಾಹೀದಿ, ಬಸವರಾಜ ಮಯೂರ, ಯೂಸುಫ್ ಸಾಹೇಬ್, ವಿಶ್ವನಾಥ, ಮಹೇಬೂಬ, ಸುನೀಲ್ ಚವ್ಹಾಣ್, ಬಸವರಾಜ ದಂಡಗುಲಕರ್, ಹೀರಾ ಪವಾರ, ಅಬ್ದುಲ್ ರಶೀದ, ಹನುಮಾನ ಕಾಂಬಳೆ, ಮುಜಿಬ, ರಮೇಶ ಬೆಳಮಗಿ. ಆರೋಗ್ಯ ಸ್ವಾಮಿ, ಸುನೀಲ್ ಸೂರ್ಯವಂಶಿ ಇತರರು ಇದ್ದರು.