ಕಲಬುರಗಿ: ಕೋವಿಡ್-19 ಅಟ್ಟಹಾಸ ಮುಂದುವರೆದಿದ್ದು, ಇಂದು ಮತ್ತೆ 15 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1436ಕ್ಕೆ ಏರಿಕೆಯಾಗಿದೆ. ಇಂದು ರಾಜ್ಯದಲ್ಲಿ ಹೊಸ 947 ಕೋವಿಡ್-19 ಪ್ರಕರಣಗಳು ವರದಿಯಾಗಿವೆ.
ಇಬ್ಬರು ಮಕ್ಕಳು, 3 ಮಹಿಳೆಯರು, 10 ಪುರುಷರು ಕೊರೊನಾ ಖಚಿತ ಪಟ್ಟಿದೆ. ಇಂದು 47 ಜನ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 18ಜನ ಕೊರೊನಾಗೆ ಬಲಿಯಾಗಿದ್ದು, ರಾಜ್ಯದಲ್ಲಿ 246 ಮಂದಿ ಮೃತಪಟ್ಟಿದ್ದಾರೆ.