ಸುರಪುರ ಕಾಂಗ್ರೆಸ್ ಕಛೇರಿಯಲ್ಲಿ ಪ್ರತಿಜ್ಞಾ ದಿನ ಕಾರ್ಯಕ್ರಮ

0
90

ಸುರಪುರ: ಕೆಪಿಸಿಸಿ ನೂತನ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಮತ್ತು ನೂತನ ಕಾರ್ಯಾಧ್ಯಕ್ಷರಾಗಿ ಈಶ್ವರ ಖಂಡ್ರೆ ಮತ್ತು ಸತೀಶ ಜಾರಕಿಹೊಳೆ ಹಾಗು ಸಲೀಂ ಅಹ್ಮದ್ ಅವರ ಪದಗ್ರಹಣ ಸಮಾರಂಭದ ಅಂಗವಾಗಿ ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ಪ್ರತಿಜ್ಞಾ ದಿನ ಕಾರ್ಯಕ್ರಮದ ಅಂಗವಾಗಿ ಸುರಪುರ ಕಾಂಗ್ರೇಸ್ ಕಚೇರಿಯಲ್ಲಿಯೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಮಾತನಾಡಿ, ಇಂದು ನಮ್ಮ ದೇಶದ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರವಾಗಿದೆ ಮತ್ತು ಜನರ ಸರ್ವತೋಮುಖ ಅಭಿವೃದ್ಧಿಗೆ ಪಕ್ಷ ಅಧಿಕಾರಾವಧಿಯಲ್ಲಿ ಹತ್ತುಹಲವು ಕಾರ್ಯಕ್ರಮಗಳನ್ನು ನೀಡುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದೆ.ಈಗ ಕಾಂಗ್ರೆಸ್ ಪಕ್ಷದ ನೂತನ ಸಾರಥಿಗಳಾಗಿರುವ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಮತ್ತು ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ, ಸಲೀಂ ಅಹ್ಮದ್‌ರ ಅಧಿಕಾರ ಸ್ವೀಕಾರ ಮತ್ತು ಪ್ರತಿಜ್ಞಾ ದಿನದ ಕಾರ್ಯಕ್ರಮದ ಅಂಗವಾಗಿ ಸವಿಂಧಾನದ ಪೀಠಿಕೆಯಂತೆ ನಡೆದುಕೊಂಡು ದೇಶಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆಯನ್ನು ಮನನ ಮಾಡಿಸಲು ಮತ್ತು ಪಕ್ಷದ ಸಂಘಟನೆಯ ಬಲಪಡಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

Contact Your\'s Advertisement; 9902492681

ನಂತರ ಮಾಜಿ ಶಾಸಕ ರಾಜಾವೆಂಕಟಪ್ಪ ನಾಯಕ ಮಾತನಾಡಿ ಪ್ರತಿಜ್ಞಾ ವಿಧಿ ಸ್ವಿಕಾರ ಕಾರ್ಯಕ್ರಮವನ್ನು ತಾಲೂಕು ಬ್ಲಾಕ ಕಾಂಗ್ರೆಸ್ ಹಾಗೂ ಯುತ್ ಕಾಂಗ್ರೆಸ್ ವತಿಯಿಂದ ಸುರಪುರ ಮತ್ತು ಹುಣಸಗಿ ತಾಲೂಕಿನಲ್ಲಿ ಬೂತಮಟ್ಟದ ಎಲ್ಲಾ ಕಾರ್ಯಕರ್ತರು ಒಟ್ಟುಗೂಡಿ ಟಿ.ವಿ ಮಾಧ್ಯಮ ಮತ್ತು ಸೋಶಿಯಲ್ ಮೀಡಿಯಾಗಳ ಮುಖಾಂತರ ಪ್ರತಿಜ್ಞಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮರಳಿ ಕಾಂಗ್ರೆಸ್ ಪಕ್ಷವನ್ನು ಸಂಘಟನೆಯನ್ನು ಬಲಪಡಿಸಲು ಹಾಗೂ ಜನರಿಗೆ ಕಾಂಗ್ರೆಸ್ ಪಕ್ಷದ ಕುರಿತು ಮತ್ತು ಪಕ್ಷ ಆಡಳಿತದಲ್ಲಿದ್ದಾಗ ಕೈಗೊಂಡಿರುವ ಜನಪರ ಕಾರ್ಯಗಳನ್ನು ಜನರಿಗೆ ತಲುಪಿಸಿ ಮತ್ತೆ ನಮ್ಮ ಪಕ್ಷವನ್ನು ರಾಜ್ಯ ಮತ್ತು ದೇಶದಲ್ಲಿ ಬಲಿಷ್ಠವಾಗಲು ನಮ್ಮೆಲ್ಲ ಕಾರ್ಯಕರ್ತರು ಮುಂದಾಗಬೇಕು ಹಾಗೂ ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ-೧೯ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಈ ಮಾಹಮಾರಿಂದ ಸಾವಿನ ಸಂಖ್ಯೆಯು ಏರಿಕೆಯಾಗುತ್ತಿದೆ. ಹಾಗೂ ಈ ಸೋಂಕು ಸಮುದಾಯಕ್ಕೆ ಹರಡದಂತೆ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಹಾಗೂ ಮಾಸ್ಕ್ ಧರಿಸಿ ಮುಂಜಾಗ್ರತೆಯನ್ನು ವಹಿಸುವಂತೆ ತಿಳಿಹೆಳಬೇಕೆಂದು ತಿಳಿಸಿದರು.

ಮುಖಂಡರಾದ ಸೂಲಪ್ಪ ಕಮತಗಿ, ಅಪೇಕ್ಷ ಬ್ಯಾಂಕ್ ರಾಜ್ಯ ನಿರ್ದೇಶಕ ವಿಠ್ಹಲ್ ಯಾದವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಣ್ಣ ಬಾಚಿಮಟ್ಟಿ, ರಾಜಾ ಸುಭಾಶ್ಚಂದ್ರ ನಾಯಕ, ರಾಜಾ ಸಂತೋಷ ನಾಯಕ, ಪ್ರಕಾಶ ಗುತ್ತೇದಾರ, ಎ.ಆರ್.ಪಾಷಾ, ಅಹ್ಮದ ಪಠಾಣ, ವೆಂಕಟೇಶ ಪೋತಲಕರ್, ವೆಂಕಣ್ಣ ಪರಾಸಿ, ವೆಂಕಟರಡ್ಡಿ ಭೊವಿ, ಅಹ್ಮದ ಶರೀಫ್ ನಗರಸಭೆ ಸದಸ್ಯರು, ಮನೋಹರ ಕುಂಟೋಜಿ, ರಮೇಶ ಕುಲಕರ್ಣಿ, ವಿರೇಶ ದೇಶಮುಖ, ಹುಸೇನ ಪಾಷಾ ಕುಂಬಾರಪೇಟ, ಶರಣಗೌಡ ದೇವಾಪುರ, ಅಡಿವೆಪ್ಪ ತೇಲಕರ, ದಾವುದ ಪಠಾಣ, ಶೇಖ ಸುಲೇಮಾನ, ಪರಶುರಾಮ ನಾಯಕ ಮಂಗಿಹಾಳ, ಯೂಸೂಫ ಜಮಾದಾರ ಇನ್ನಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here