ಕಲಬುರಗಿ: ಆಳಂದ ನಗರದ ಮಹ್ಮದ್ ಮಿಯಾ ದಾರುಲ್ ಉಲುಮ್ ಸಭಾಗಂಣದಲ್ಲಿ ಹಾಗೂ ವಿವಿಧ ಬಡಾವಣೆಯಲ್ಲಿ ಜೆಡಿಎಸ್ ಘಟಕ ಹಾಗೂ ಎಚ್‌ಕೆಇ ಸಂಸ್ಥೆ ಮಾಲಕರೆಡ್ಡಿ ಹೋಮಿಯೋಪಥಿ ಆಸ್ಪತ್ರೆಯ ಆಶ್ರಯದಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಧ್ಯಕ್ಷ ಸೈಯದ್ ಜಾಫರ್ ಹುಸೇನ್ ನೇತೃತ್ವದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಹೊಮಿಯೋಪಥಿ ಮಾತ್ರೆ ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಯಿತು.
ಈ ವೇಳೆ ಜೆಡಿಎಸ್ ಜಿಲ್ಲಾ ಕಾರ್ಯಧ್ಯಕ್ಷ ಸೈಯದ್ ಜಾಫರ್ ಹುಸೇನ್ ಮಾತನಾಡಿ, ಇತ್ತೀಚೆಗೆ ಕೊರೊನಾ ಸೋಂಕಿನಿಂದ ಜನರು ಬಳಲುತ್ತಿದ್ದರು, ಇದಕ್ಕೆ ಸರಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ ಎಚ್‌ಕೆಇ ಸಂಸ್ಥೆ ಮಾಲಕರೆಡ್ಡಿ ಹೋಮಿಯೋಪಥಿಯಿಂದ ಜನರಿಗೆ ಟ್ಯಾಬ್ಲೆಟ್ ನೀಡಿ ಜನರಿಗೆ ಜಾಗ್ರತೆ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಕೊರೊನಾ ರೋಗಕ್ಕೆ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವುದೆ ಔಷಧಿಯಾಗಿದ್ದು, ಎಲ್ಲರೂ ರೋಗ ನಿರೋಧಕ ಶಕ್ತಿ ವೃದ್ಧಿಸುವ ಮಾತ್ರೆ ಸೇವಿಸಿ ಕರೋನಾ ಬರದಂತೆ ತಡೆಯಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಸುಮಾರು ಎರಡರಿಂದ ಮೂರು ಲಕ್ಷ ರೋಗ ನಿರೋಧಕ ಶಕ್ತಿ ವೃದ್ಧಿಸುವ ಮಾತ್ರೆಗಳನ್ನು ವಿತರಿಸಲಾಗಿದೆ. ಈ ಮಾತ್ರೆಗಳನ್ನು ಆರು ತಿಂಗಳ ಮಗುವಿಗೆ, ಗರ್ಭಿಣಿ ಮಹಿಳೆ, ರಕ್ತದೊತ್ತಡ, ಸಕ್ಕರೆ ಕಾಯಿಲೆಗಳು ಇದ್ದಂತಹ ವ್ಯಕ್ತಿಗಳು ಕೂಡ ಸೇವಿಸಬಹುದು ಎಂದು ವೈದ್ಯರು ದೃಡಪಡಿಸಿದ ನಂತರವೇ ರೋಗ ನಿರೋಧಕ ಶಕ್ತಿ ವೃದ್ಧಿಸುವ ಮಾತ್ರೆಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಮಾಲಕರೆಡ್ಡಿ ಹೋಮಿಯೋಪಥಿ ಕಾಲೇಜಿನ ಪ್ರಾಚಾರ್ಯ ಡಾ.ಪಿ.ಸಂಪತಕುಮಾರ, ಮೆಡಿಕಲ್ ಸುಪ್ರಿಡೆಂಟ್ ಡಾ.ರಾಜೇಂದ್ರ ಪಾಟೀಲ್, ಆಳಂದ ನಗರದ ಕೌನ್ಸಲರ್‌ರಾದ ಆಶಿಫ್ ಅಲಿ ಚೌಸ್, ಅಬ್ದುಲ್ ವಾಹಿದ್ ಜರ್ದಿ, ಸಂಜು ನಾಯಕ್, ತಯಾಬ್ ಅಲಿಶೇಖ್, ಪಕ್ರೋದ್ದಿನ್ ಸಾವಳಗಿ, ಲಕ್ಷ್ಮಣ ಝಳಕಿಕರ್, ಪಿರದೋಸ್ ಅನ್ಸಾರಿ, ಅಬ್ದುಲ್ ಮಜೀದ್, ಅಂಜದ್ ಕರ್ಜಗಿ, ಮಾಜಿ ಕೌನ್ಸಲರ್‌ರಾದ ಸಿಫಾನ್ ಜವಳೆ, ಮೋಯಿಜ್ ಕಾರಬಾರಿ, ಜೆಡಿಎಸ್ ಮುಖಂಡರಾದ ಅಹ್ಮದ್ ಅಲಿ ಚೌಸ್, ಬಸವರಾಜ ಸಾಗರ, ಎಂ.ಎ.ಗಪೂರ ಜಿಲಾನಿ, ಇಲಿಯಾಸ್ ಅನ್ಸಾರಿ, ನೂರ್ ಅಹ್ಮದ್, ಇಬ್ರಾಹಿಂ ಬಾಜೆ, ಯೂಸುಫ್ ಖಾಜಿ ಇತರರಿದ್ದರು.