ಶಹಾಪುರ : ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರದಲ್ಲಿ ಇತ್ತೀಚೆಗೆ ನೂತನವಾಗಿ ಅಕಾಡೆಮಿ ಹಾಗೂ ಪ್ರಾಧಿಕಾರದ ಸದಸ್ಯರನ್ನು ನೇಮಕ ಮಾಡುವಲ್ಲಿ ಸಂಪೂರ್ಣವಾಗಿ ಕೊಪ್ಪಳ ಜಿಲ್ಲೆಯನ್ನು ನಿರ್ಲಕ್ಷಿಸಲಾಗಿದೆ ಎಂದು ಹೈದ್ರಾಬಾದ್ ಕರ್ನಾಟಕ ನಾಗರಿಕರ ವೇದಿಕೆಯ ರಾಜ್ಯಾಧ್ಯಕ್ಷರಾದ ಮಹೇಶ್ ಬಾಬು ಸುರ್ವೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೊಪ್ಪಳ ಜಿಲ್ಲೆಯ ಇತಿಹಾಸವನ್ನು ಬಹುಶಃ ಸಚಿವರಿಗೆ ಗಮನಕ್ಕೆ ಇರದಿರುವುದೆ ನಾಚಿಕೆಗೇಡಿನ ಸಂಗತಿ ಎಂದು ಹರಿಹಾಯ್ದರು ಗತಕಾಲದಿಂದಲೂ ಕೊಪ್ಪಳ ಜಿಲ್ಲೆಯ ಸಾಹಿತ್ಯಿಕವಾಗಿ ಸಾಂಸ್ಕೃತಿಕವಾಗಿ ಶೈಕ್ಷಣಿಕವಾಗಿ ತನ್ನದೇ ಆದ ಮೆರುಗನ್ನು ತಂದುಕೊಟ್ಟಿ ಇಲ್ಲಿಯ ಹಲವಾರು ಕವಿಗಳು ಕಲಾವಿದರು ಸಾಹಿತಿಗಳು ನಾಡಿಗೆ ಪರಿಚಯಿಸಿರುವ ಕೀರ್ತಿ ಕೊಪ್ಪಳ ಜಿಲ್ಲೆಗೆ ಸಲ್ಲುತ್ತದೆ.
ಇದಾವುದನ್ನೂ ಪರಿಗಣಿಸದೆ ಏಕಪಕ್ಷೀಯ ನಿರ್ಧಾರವನ್ನು ತೆಗೆದುಕೊಂಡು ಕೊಪ್ಪಳ ಜಿಲ್ಲೆಯನ್ನು ನಿರ್ಲಕ್ಷಿಸಿರುವ ಮೊನ್ನೆ ಸಿಟಿ ರವಿಯವರಿಗೆ ಧಿಕ್ಕಾರ ಎಂದು ಹೇಳಿದರು.