ಕಲಬುರಗಿ: ಶರಣ ಹಡಪದ ಅಪ್ಪಣ್ಣನವರ 886ನೇ ಜಯಂತಿ ಹಿನ್ನೆಲೆಯಲ್ಲಿ ಭಾನುವಾರ ಇಲ್ಲಿನ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಸಾಮಾಜಿಕ ಅಂತರ ಕಾಪಾಡುವುದರ ಜೊತೆಗೆ ಸರಳವಾಗಿ ಆಚರಿಸಲಾಯಿತು.
ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯಿಂದ ಅಯೋಜಿಸಲಾದ ಕಾರ್ಯಕ್ರಮದಲ್ಲಿ ಗಣ್ಯರೆಲ್ಲರೂ ಶರಣ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಎ.ಎಸ್.ಐ. ಸಲೀಂ ಪಟೇಲ, ಹಡಪದ ಸಮಾಜದ ಜಿಲ್ಲಾಧ್ಯಕ್ಷ ಈರಣ್ಣ ಸಿ. ಹಡಪದ, ಮುಖಂಡರಾದ ರಮೇಶ ನೀಲೂರ, ಭಗವಂತ ಹೊನ್ನಕಿರಣಗಿ, ಆನಂದ ಜೋಳಗಿ, ಮಹಾಂತೇಶ ಇಸ್ಲಾಂಪುರೆ, ಅಪ್ಪಣ್ಣ ಬಟಗೇರಾ, ಸಂತೋಷ ಬಗದೂರಗಿ, ಸುನೀಲ ಹಿಪ್ಪರಗಿ, ಚಂದ್ರಕಾಂತ ತೊನಸನಳ್ಳಿ, ಭಾಗಣ್ಣ ಹಡಪದ ಸೇರಿದಂತೆ ಸಮಾಜದ ಇನ್ನಿತರ ಮುಖಂಡರು ಇದ್ದರು.