ಶಹಾಪುರ: ತಾಲ್ಲೂಕಿನ ಹೊತಪೇಟ ಗ್ರಾಮ ಪಂಚಾಯಿತಿ ಕಟ್ಟಡದ ಮೇಲೆ ರಾಷ್ಟ್ರಧ್ವಜ ಅರ್ಧಕ್ಕೆ ಹಾರಿಸಿ ಅವಮಾನ ಮಾಡಲಾಗಿದೆ ಆದ್ದರಿಂದ ಕೂಡಲೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತು ಮಾಡಿ ತನಿಖೆಗೆ ಆದೇಶಿಸಬೇಕು ಎಂದು ದಲಿತ ಸೇನೆಯ ಜಿಲ್ಲಾಧ್ಯಕ್ಷರಾದ ಅಶೋಕ ಹೊಸಮನಿ ಗೋಗಿ ಆಗ್ರಹಿಸಿದ್ದಾರೆ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸ್ವಲ್ಪವಾದರೂ ಪರಿಜ್ಞಾನವಿಲ್ಲ,ಸರ್ಕಾರಿ ಸಂಬಳ ತೆಗೆದುಕೊಂಡು ರಾಷ್ಟ್ರಧ್ವಜದ ಬಗ್ಗೆ ಸ್ವಲ್ಪವಾದರೂ ಸೌಜನ್ಯ ಇರದ ಅಧಿಕಾರಿಗಳು ಬೇಡ, ಇಂಥವರಿಗೆ ತಕ್ಕ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಮತ್ತೆ ಇಂಥ ಘಟನೆಗಳು ಮರುಕಳಿಸದಂತೆ ಜಾಗರೂಕತೆ ವಹಿಸಬೇಕು, ಮೇಲಧಿಕಾರಿಗಳು ತಾಕೀತು ಮಾಡಿ ಇಂಥವರ ಮೇಲೆ ನಿಗಾ ಇಡಬೇಕು.
ನಿರ್ಲಕ್ಷ್ಯ ವಹಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಇಲ್ಲದಿದ್ದರೆ ಬೀದಿಗಿಳಿದು ವಿವಿಧ ಸಂಘಟನೆಗಳ ಒಕ್ಕೂಟದಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು,ಈ ಸಂದರ್ಭದಲ್ಲಿ ಬಸು ನಾಟೇಕರ್ ಇದ್ದರು.